ಬೆಂಗಳೂರು : ಸೈಲೆಂಟ್ ಸುನೀಲ್ ಬೆನ್ನಲ್ಲೆ ಮತ್ತೊಬ್ಬ ರೌಡಿ ಶೀಟರ್ ಬಿಜೆಪಿ ಸೇರ್ಪಡೆಯಾಗಿದ್ದು, ಕ್ರಿಕೆಟ್ ಬುಕ್ಕಿ , ಕಿಂಗ್ ಪಿನ್ ಮಲ್ಲಿಕಾರ್ಜುನ್ @ ಫೈಟರ್ ರವಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಬಯಸಿದ್ಧಾರೆ. ಸಚಿವ ಅಶ್ವಥ್ ನಾರಾಯಣ್, ಗೋಪಾಲಯ್ಯ, ಸಿಪಿ ಯೋಗೇಶ್ವರ್ ಸಮ್ಮುಖದಲ್ಲಿ ಫೈಟರ್ ರವಿ ಬಿಜೆಪಿ ಸೇರ್ಪಡೆಗೊಂಡಿದ್ಧಾರೆ.
ಬಿಜೆಪಿ ರೌಡಿಶೀಟರ್ ಗಳು ಬುಕ್ಕಿಗಳ ಸೇರ್ಪಡೆಯಿಂದ ಯಾವ ಮೆಸೇಜ್ ಕೊಡೋಕೆ ಹೊರಟಿದೆ ಗೊತ್ತಿಲ್ಲ. ನಿನ್ನೆ ಬಿಜೆಪಿ ನಾಯಕರ ಜೊತೆ ಸೈಲೆಂಟ್ ಸುನೀಲ್ ದೊಡ್ಡ ಪ್ರೋಗ್ರಾಂ ಮಾಡಿದ್ದನು, ಇಂದು ಬುಕ್ಕಿ ಫೈಟರ್ ರವಿಯಿಂದ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆದಿದೆ. ಫೈಟರ್ ರವಿ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ಧಾನೆ.
ಇದನ್ನೂ ಓದಿ : ಬಿಜೆಪಿಯ ಹಿರಿಯ ಮುಖಂಡ ಎ.ಬಿ.ಮಾಲಕರೆಡ್ಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ..?