ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಂತ ವೈದ್ಯೆಯಿಂದ ಎಡವಟ್ಟು ನಡೆದಿದ್ದು, ರೂಟ್ ಕೆನಾಲ್ ಚಿಕಿತ್ಸೆಯಿಂದ ನಟಿ ಮುಖ ವಿರೂಪವಾಗಿದೆ. ನಟಿ ಪಾಲಿಗೆ ಡೆಂಟಿಸ್ಟ್ ವಿಲನ್ ಆಗಿದ್ಧಾರೆ.
ನಟಿ ಸ್ವಾತಿ ಮೇ 28 ರಂದು ಜೆ.ಪಿ. ನಗರದ ಕ್ಲಿನಿಕ್ಗೆ ಹೋಗಿದ್ದು, ದಂತ ವೈದ್ಯೆ ಮಯೂರಿ ಬಳಿ ರೂಟ್ ಕೆನಾಲ್ ಮಾಡಿಸಿಕೊಂಡಿದ್ದಾರೆ. ಚಿಕಿತ್ಸೆಗಾಗಿ ಮಯೂರಿ 8 ಸಾವಿರ ಬಿಲ್ ಮಾಡಿದ್ದು, ಒಂದು ದಿನದಲ್ಲಿ ಊತ ಇಳಿಯುತ್ತೆ ಎಂದು ತಿಳಿಸಿದ್ದಾರೆ. ಆದರೆ 20 ದಿನ ಕಳೆದರೂ ಸ್ವಾತಿ ಮುಖದಲ್ಲಿ ಊತ ಕಡಿಮೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ನಟಿ ಸದ್ಯ ಬೇರೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಮಂಡ್ಯದ 5 ರೂಪಾಯಿ ಡಾಕ್ಟರ್ ಶಂಕರೇಗೌಡರಿಗೆ ಓಪನ್ ಹಾರ್ಟ್ ಸರ್ಜರಿ…