ಬೆಂಗಳೂರು: ಮೋದಿ ಹೋದ ದಾರಿಯಲ್ಲೇ ರಸ್ತೆ ಡಾಂಬರ್ ಕಿತ್ತುಬಂದಿದ್ದು, 23 ಕೋಟಿ ವೆಚ್ಚದ ಡಾಂಬರ್ಮೂರೇ ದಿನಕ್ಕೆ ಕುಸಿದಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಪ್ರಧಾನಿ ಮೋದಿ ಬರ್ತಾರೆ ಅಂತ ಬಿಬಿಎಂಪಿ, ಮೋದಿ ಸಂಚಾರಿಸೋ ರಸ್ತೆಗಳಿಗೆ 23 ಕೋಟಿ ವೆಚ್ಚದಲ್ಲಿ ಗುಂಡಿ ಮುಚ್ಚಿ ರಸ್ತೆಗೆ ಡಾಂಬರೀಕರಣ ಮಾಡಿತ್ತು. ನಗರದ ಮಲ್ಲತ್ತಹಳ್ಳಿ , ಅಂಬೇಡ್ಕರ್ ರಸ್ತೆ, ಕೊಮ್ಮಘಟ್ಟ ರಸ್ತೆ, ಬೆಂಗಳೂರು ವಿ.ವಿ ಅವರಣದ ರಸ್ತೆಗಳಿಗೆ ಪಾಲಿಕೆ ಡಾಂಬರೀಕರಣ ಮಾಡಿತ್ತು. ಒಂದೇ ವಾರದಲ್ಲಿ ಬಿಬಿಎಂಪಿ 14 ಕಿಲೋಮೀಟರ್ ರಸ್ತೆ ಕಾಮಗಾರಿ ಮಾಡಿತ್ತು. ಆದರೆ ಇದೀಗ ರಸ್ತೆ ಕಿತ್ತು ಹೋಗಿರುವುದರಿಂದ ಕಳಪೆ ಕಾಮಗಾರಿ ಎದ್ದು ಕಾಣುತ್ತಿದ್ದು, ಕಾಮಗಾರಿ ಸಂಬಂಧ ಮೂವರು ಇಂಜಿನಿಯರ್ ಗಳಿಗೆ ಶೋಕಸ್ ನೋಟೀಸ್ ಜಾರಿ ಮಾಡಲಾಗಿದೆ. ಚೀಪ್ ಇಂಜಿನಿಯರ್ ಶೋಕಸ್ ನೋಟೀಸ್ ಜಾರಿ ಮಾಡಿದ್ದು, ಮೂರು ದಿನದಲ್ಲಿ ಕಾಮಗಾರಿ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಅದೇಶ ಹೊರಡಿಸಲಾಗಿದೆ. ಇಲ್ಲವಾದರೆ ಕಾನೂನು ಕ್ರಮದ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ:ಬಿಜೆಪಿ ನೇತೃತ್ವದ ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ… ದ್ರೌಪದಿ ಮುರ್ಮು ಇಂದು ನಾಮಪತ್ರ ಸಲ್ಲಿಕೆ..!