ಬೆಂಗಳೂರು : ಪಠ್ಯ ಪುಸ್ತಕ ವಿವಾದದ ಬಗ್ಗೆ ಸಿಎಂಗೆ ಪತ್ರ ಬರೆದಿದ್ದೇನೆ. ವಿವಾದದ ಬಗ್ಗೆ ಅವರು ಏನ್ ತೀರ್ಮಾನ ಮಾಡ್ತಾರೆ ನೋಡಿ ಹೋರಾಟ ನಿರ್ಧರಿಸುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ದೇವೇಗೌಡರು ಮಾತನಾಡಿ ಪರಿಷ್ಕೃತ ಪಠ್ಯ ಪುಸ್ತಕ ವಾಪಸ್ ಪಡೆಯಲು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ. ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯ ಮುಂದುವರೆಸಲು ಸಾಹಿತಿಗಳು, ವಕೀಲರು ಸೇರಿ ಅನೇಕರು ಆಗ್ರಹ ಮಾಡ್ತಿದ್ದಾರೆ. ಸಿಎಂ ಉತ್ತರಕ್ಕೆ ಕಾಯುತ್ತಿದ್ದೇನೆ ಎಂದು ದೇವೇಗೌಡರು ತಿಳಿಸಿದ್ದಾರೆ.
ಇದನ್ನೂ ಓದಿ :ಮಹಾರಾಷ್ಟ್ರದಲ್ಲಿ ಕ್ಷಣಕ್ಕೊಂದು ಡೆವಲಪ್ಮೆಂಟ್..! ಸಿಎಂ ನಿವಾಸ ತೊರೆದ ಉದ್ಧವ್ ಠಾಕ್ರೆ ಇಂದೇ ರಿಸೈನ್ ಮಾಡ್ತಾರಾ..?