ಬೆಂಗಳೂರು: ಚಾಮರಾಜನಗರ ಉಸ್ತುವಾರಿ ನೀಡಿರುವ ಬಗ್ಗೆ ವಸತಿ ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿದ್ದು, ಮೂಟೆ ಹೊರುವವರಿಗೆ ಎಲ್ಲಾದರೂ ಒಂದೇ, ಯಾವುದೇ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿಭಾಯಿಸುವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ವಿ ಸೋಮಣ್ಣ ಬೆಂಗಳೂರು ಉಸ್ತುವಾರಿಯನ್ನು ಕೇಳಿದ್ದು ನಿಜ , ಆದರೆ ಬೆಂಗಳೂರು ಉಸ್ತುವಾರಿ ಸಿಎಂ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಒಂದು ರೀತಿ ಬೆಂಗಳೂರು ಉಸ್ತುವಾರಿ ಸಿಎಂ ಬಳಿ ಇರುವುದು ಒಳ್ಳೆಯದು ಎಂದು ಹೇಳಿದ್ದಾರೆ. ಸಿಎಂ ಹಾಗೂ ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ದೂರದೃಷ್ಟಿ ಇದೆ. ಬಿಜೆಪಿ ಸರ್ಕಾರ ಇರುವ ಕಡೆ ಅನುಸರಿಸಿದ ರೂಲ್ಸ್ ಇಲ್ಲೂ ಅನ್ವಯ ಆಗಿದೆ. ಯಾವ ಸಚಿವರಿಗೂ ಅವರದ್ದೇ ಜಿಲ್ಲೆಯ ಉಸ್ತುವಾರಿಯನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿಲ್ಲ ಈ ಬಗ್ಗೆ ಮಾತನಾಡಿದ್ದು ,ಅಶೋಕ್ ನಮ್ಮ ಸ್ನೇಹಿತರು, ಸಾಮ್ರಾಟರು, ನಮಗೆಲ್ಲ ಬೇಕಾದವರು. ಅಶೋಕ್ ಕೈಬಿಡುವ ಪ್ರಶ್ನೆ ಇಲ್ಲ, ಅಶೋಕ ಅವರನ್ನು ಸುಮ್ಮನೆ ಕೂರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸೈಕಲ್ ಏರಿ ಧಾರವಾಡ ಸಿಟಿ ಸುತ್ತಾಡಿದ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಕಮಿಷನರ್..! ಸ್ವಚ್ಛ ಸರ್ವೇಕ್ಷಣಾ ಅಭಿಯಾನ ಯಶಸ್ಸಿಗಾಗಿ ಕರೆ..