ಬೆಂಗಳೂರು: ಬಿಬಿಎಂಪಿಯ 243 ವಾರ್ಡ್ ಗಳಿಗೆ ರಾತ್ರೋರಾತ್ರಿ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಂಡಿದೆ. ಮೀಸಲಾತಿ ನಿಗಧಿ ಜನಸಂಖ್ಯೆಗೆ ಅನುಗುಣವಾಗಿ ನಡೆದಿಲ್ಲ ಎಂಬ ಆರೋಪದ ಜೊತೆಗೆ ಕೆಲ ಶಾಸಕರು ತಮಗಾದವರಿಗೆ ಟಿಕೆಟ್ ತಪ್ಪಿಸುವ ಉದ್ದೇಶದಿಂದಲೇ ಮನಸೋ ಇಚ್ಚೆ ಮೀಸಲಾತಿ ವಿಂಗಡಿಸಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಿಬಿಎಂಪಿಯ 243 ವಾರ್ಡ್ಗಳಿಗೆ ರೂಪಿಸಿರುವ ಮೀಸಲಾತಿಗೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರಲ್ಲೂ ಅಸಮಾಧಾನ ಹೆಚ್ಚಾಗಲು ಕಾರಣವಾಗಿದ್ದು,ವಿಧಾನಸಭೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಲು ಇಷ್ಟವಿಲ್ಲದೆ ಬಿಜೆಪಿಯವರು ಯದ್ವಾತದ್ವಾ ಮೀಸಲಾತಿ ಕಲ್ಪಿಸಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಬಿಜೆಪಿ ಮಾಜಿ ಕಾರ್ಪೊರೇಟರ್ಗಳು ಹಾಗೂ ಮುಖಂಡರಿಗೆ ಅನುಕೂಲವಾಗದ ರೀತಿಯಲ್ಲಿ ಮೀಸಲಾತಿ ನಿಗದಿ ಮಾಡಲಾಗಿದೆ. ಕೆಲವು ಶಾಸಕರು ಮುರ್ನಾಲ್ಕು ಬಾರಿ ಕಾರ್ಪೊರೇಟರ್ ಆದವರಿಗೆ ಮೀಸಲಾತಿ ವಿರುದ್ಧವಾಗಿರುವಂತೆ ಹೀಗೆ ಮುಂದೆ ಕ್ಷೇತ್ರದಲ್ಲಿ ತಮಗೆ ಎದುರಾಳಿ ಆಗದಂತೆ ತಡೆಯುವಲ್ಲಿ ಯಶ ಸಾಧಿಸಿದ್ದಾರೆ. ಎಂದು ಬಿಜೆಪಿ ಮಾಜಿ ಕಾರ್ಪೊರೇಟರ್ಗಳು ದೂರಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಪಬ್ಲಿಕ್ ಕಾಲೇಜಿನ ಮೇಲ್ಚಾವಣಿ ಕುಸಿತ… ಮೂರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ…