ಕಲಬುರಗಿ: ಸೌದಿ ಅರೇಬಿಯಾದಿಂದ ಕಲಬುರಗಿಗೆ ಬಂದಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದ್ಮೇಲೆ ಕಲಬುರಗಿ ಜನರು ಶಾಕ್ ಆಗಿದ್ದರು. ಸೋಂಕಿತ ವ್ಯಕ್ತಿಯ ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್ನಲ್ಲಿ ಓಮಿಕ್ರಾನ್ ನೆಗೆಟಿವ್ ಬಂದಿದೆ. ಹೀಗಾಗಿ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಲಬುರಗಿ ಜಿಲ್ಲೆಗೆ ವಿದೇಶದಿಂದ 25 ಮಂದಿ ಬಂದಿದ್ದು ಎಲ್ಲರ ರಿಪೋರ್ಟ್ ನೆಗೆಟಿವ್. ನಮ್ಮಲ್ಲಿ ಒಮಿಕ್ರೋನ್ ಪತ್ತೆಯಾಗಿಲ್ಲ ಎಂದು ಡಿಸಿ ಜ್ಯೋತ್ಸ್ನಾ ತಿಳಿಸಿದ್ದಾರೆ.
ಇನ್ನೂ ಡಿಸಿ ಜ್ಯೋತ್ಸ್ನಾಸ ಸೋಂಕು ನಿಯಂತ್ರಣದ ಕಲಬುರಗಿಯಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದು, ಜಿಲ್ಲಾಡಳಿತ ಎಲ್ಲಾ ಕ್ರಮ ಕೈಗೊಳ್ಳಲಾಗ್ತಿದೆ. ಕಲಬುರಗಿಯಲ್ಲಿ ಮೊದಲ ಡೋಸ್ ವ್ಯಾಕ್ಸಿನ್ ಚೆನ್ನಾಗಿ ಆಗಿದೆ, ಎರಡನೇ ಡೋಸ್ ವ್ಯಾಕ್ಸಿನ್ ಹಾಕಿಸಿಕೊಳ್ಳದವರು ಆದಷ್ಟು ಬೇಗ ಹಾಕಿಸಿಕೊಳ್ಳಬೇಕು. ತಾಲ್ಲೂಕು ಆಸ್ಪತ್ರೆಯಲ್ಲಿ 100 ಬೆಡ್ ಗಳನ್ನ ನಿರ್ಮಾಣ ಮಾಡಲಾಗಿದೆ. 50 ಐಸಿಯಿ ಬೆಡ್ ಗಳನ್ನ ನಿರ್ಮಾಣ ಮಾಡಲಾಗಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ಸೇರಿ 720 ಬೆಡ್ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ಮುಂದುವರೆದ ಓಮಿಕ್ರಾನ್ ಅಬ್ಬರ…! ದೇಶದಲ್ಲಿ ನೆನ್ನೆ ಒಂದೇ ದಿನ 14 ಮಂದಿಗೆ ರೂಪಾಂತರಿ ಅಟ್ಯಾಕ್…!