ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ನಂತ್ರ. ‘777 ಚಾರ್ಲಿ’ ಮೂಲಕ ಮತ್ತೆ ಪ್ಯಾನ್ ಇಂಡಿಯಾ ಸದ್ದು ಮಾಡಲು ರೆಡಿಯಾಗಿದ್ದಾರೆ. ಇದರ ಬೆನ್ನಲ್ಲೇ 777 ಚಾರ್ಲಿ ಟಾರ್ಚರ್ ವಿಡಿಯೋ ಸಾಂಗ್ , ಒಂದಲ್ಲ ಎರಡಲ್ಲ ಪಂಚ ಭಾಷೆಗಳಲ್ಲಿ ರಿಲೀಸ್ ಮಾಡುವ ಮೂಲಕ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಇಷ್ಟೇ ಅಲ್ಲ ವಿಡಿಯೋ ಸಾಂಗ್ ಜೊತೆ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ವೊಂದನ್ನ ಕೊಟ್ಟಿದ್ದಾರೆ. ಅರೇ ಏನದು ಅಂತ ಯೋಚನೆ ಮಾಡ್ತಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ..
ಇದನ್ನೂ ಓದಿ: ನಾನು ಯಾವುದೇ ಡ್ರಗ್ಸ್ ತೆಗೆದುಕೊಂಡಿಲ್ಲ… ಇದು ನನ್ನ ನೆಲ, ನಾನು ಇಲ್ಲೇ ಇರ್ತೀನಿ, ಎಲ್ಲೂ ಓಡಿಹೋಗಲ್ಲ: ಅನುಶ್ರೀ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಮೋಸ್ಟ್ ಅವೈಟೆಡ್ ಸಿನಿಮಾ ‘777 ಚಾರ್ಲಿ’. ಈಗಾಗಲೇ ಪೋಸ್ಟರ್ ಹಾಗೂ ಟೀಸರ್ನಿಂದಲೇ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿ, ಅಭಿಮಾನಿಗಳ ಮನದಲ್ಲಿ ಕ್ಯೂರಿಯಾಸಿಟಿ ಬಿಲ್ಡ್ ಮಾಡಿತ್ತು. ಈಗ ‘777 ಚಾರ್ಲಿ’ ಸಿನಿಮಾದ ‘ಟಾರ್ಚರ್’ ಎಂಬ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು, ಶ್ವಾನ ಪ್ರಿಯರಿಗೆ ಸಂತಸ ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ಸಂಬರಗಿಗೆ ಓಪನ್ ಚಾಲೆಂಜ್ ಹಾಕಿದ ಯುವ ನಿರ್ದೇಶಕ ಕಿರಿಕ್ ಹುಡುಗ ಕೀರ್ತನ್
ಚಾರ್ಲಿಗೆ ಚೆಲ್ಲಾಟ, ಧರ್ಮನಿಗೆ ಪ್ರಾಣ ಸಂಕಟ..!
ಇದೊಂದು ಬದುಕಿನ ಪಯಣ ಹಾಗೂ ನಾಯಿಯ ಕಥೆ ಹೇಳೋ ಸಿನಿಮಾವಾಗಿದ್ದು, ರಕ್ಷಿತ್ ಶೆಟ್ಟಿ ‘ಧರ್ಮ’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ರಿಲೀಸ್ ಆಗಿರುವ ಟಾರ್ಚರ್ ವಿಡಿಯೋ ಸಾಂಗ್ನಲ್ಲಿ ಚಾರ್ಲಿಯ ತುಂಟಾಟದಿಂದ ಧರ್ಮನಿಗೆ ಆಗುವ ಟಾರ್ಚರ್ಗಳನ್ನ ತುಂಬಾ ಚೆನ್ನಾಗಿ ಬಿಂಬಿಸಿದ್ದಾರೆ. ಚಾರ್ಲಿಯನ್ನ ಸಂಬಳಿಸುವುದು ಧರ್ಮನಿಗೆ ದೊಡ್ಡ ತಲೆನೋವು. ಅಂದ್ಹಾಗೆ ಇದ್ರಲ್ಲಿ ಚಾರ್ಲಿ ಹಾಗೂ ಧರ್ಮ ಕಿತ್ತಾಟವನ್ನ ಹೈಲೆಟ್ ಮಾಡಲಾಗಿದೆ.
ಚಾರ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದೆ.
777 ಚಾರ್ಲಿ ಸಾಂಗ್ ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಮಲಯಾಳಂನಲ್ಲಿ ರಿಲೀಸ್ ಆಗಿದೆ. ಈ ನಾಲ್ಕರ ಪೈಕಿ ಕನ್ನಡದಲ್ಲಿ ಟಾರ್ಚರ್ ಸಾಂಗ್ಗೆ ನಾಗಾರ್ಜುನ್ ಶರ್ಮ ಸಾಹಿತ್ಯಕ್ಕೆ, ನೊಬಿನ್ ಪೌಲ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ವಿಜಯ್ ಪ್ರಕಾಶ್ ಅದ್ಭುತವಾಗಿ ಹಾಡಿದ್ದಾರೆ. ಇನ್ನು ರಾಜ್ ಬಿ. ಶೆಟ್ಟಿ ಸಿನಿಮಾದಲ್ಲಿ ಪಶು ವೈದ್ಯರಾಗಿ ಕಾಣಿಸಿಕೊಂಡಿದ್ದು ವಿಶೇಷ.
ಕಿರಿಕ್ ಲಕ್ಕಿ ತಿಂಗಳಲ್ಲೇ 777 ಚಾರ್ಲಿ ರಿಲೀಸ್..!
777 ಚಾರ್ಲಿ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಷಯಕ್ಕೆ ಸಾಕಷ್ಟು ಸುದ್ದಿ ಮಾಡ್ತಿತ್ತು. ಬೆಂಗಳೂರು ಸೇರಿದಂತೆ ಕೊಡೈಕೆನಾಲ್, ಹಿಮಾಚಲ ಪ್ರದೇಶ, ಕಾಶ್ಮೀರ ಸೇರಿದಂತೆ ಅನೇಕ ಕಡೆ ಶೂಟಿಂಗ್ ಮುಗಿಸಿದ ಚಿತ್ರತಂಡ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇನ್ನು ಸಿಂಪಲ್ ಸ್ಟಾರ್ಗೆ ಡಿಸೆಂಬರ್ ಲಕ್ಕಿ ತಿಂಗಳು ಅಂತ ಹೇಳಬಹುದು. ಯಾಕಂದ್ರೆ ಕಿರಿಕ್ ಪಾರ್ಟಿ ಸಹ ಡಿಸೆಂಬರ್ನಲ್ಲಿ ರಿಲೀಸ್ ಆಗಿ, ಸೂಪರ್ ಹಿಟ್ ಆಗಿತ್ತು. ಈಗ 777 ಚಾರ್ಲಿ ಸಿನಿಮಾವನ್ನ ಡಿಸೆಂಬರ್ 31ಕ್ಕೆ ರಿಲೀಸ್ ಮಾಡಲಿದೆ ಚಿತ್ರತಂಡ.
ಒಟ್ಟಾರೆಯಾಗಿ ನಿರ್ದೇಶಕ ಕಿರಣ್ ರಾಜ್ ಕೆ ಕೈಚಳಕ ವರ್ಕೌಟ್ ಆಗಿದ್ದು, ರಕ್ಷಿತ್ ಹಾಗೂ ಆ ನಾಯಿಯ ನಟನೆ ಅದ್ಭುತವಾಗಿದೆ. ಸಂಗೀತಾ ಶೃಂಗೇರಿ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಲಾಕ್ಡೌನ್ ಕೊರೊನಾ ಸಮಯದಲ್ಲಿಯೂ ಟೀಸರ್ ಬಂಪರ್ ಹೊಡೆದಿದ್ದು, ಈಗ ಸಾಂಗ್ ಮೂಲಕ ಹೊಸ ಅಲೆ ಎಬ್ಬಿಸುತ್ತಿದೆ.