ಬೆಂಗಳೂರು : PSI ಪ್ರಕರಣ ಭಾರೀ ಟ್ವಿಸ್ಟ್ ಪಡೆಯುತ್ತಿದ್ದು, ಆ ಪೆನ್ ಡ್ರೈವ್ನಲ್ಲಿದೆಯಾ 3 ಕೋಟಿ ಸೀಕ್ರೆಟ್..?
ಆರೋಪಿಗಳ ಜತೆ CID ಅಧಿಕಾರಿಗಳು ಡೀಲ್ ಮಾಡಿರೋ ಆರೋಪ ಮಾಡಿದ್ದು, RD ಪಾಟೀಲ್ CID ಡೀಲ್ನ ಸಂಪೂರ್ಣ ಸಾಕ್ಷಿ ನೀಡಿ ಸರೆಂಡರ್ ಆಗಿದ್ದಾರೆ. ಪೆನ್ಡ್ರೈವ್ನಲ್ಲಿರೋ ವಿಡಿಯೋ, ಆಡಿಯೋ ಸಾಕ್ಷಿ ಸಂಕಷ್ಟ ತರುತ್ತಾ..?
ಆರ್.ಡಿ.ಪಾಟೀಲ್ ದೂರಿನ ಪ್ರತಿ ಜೊತೆ ಪೆನ್ ಡ್ರೈವ್ ಇಟ್ಟು ಕಳಿಸಿದ್ದು, ಗೃಹ ಸಚಿವರು, ಲೋಕಾಯುಕ್ತ, ADGP ಅಲೋಕ್ ಕುಮಾರ್ , ಕಲಬುರಗಿ ಪೊಲೀಸ್ ಕಮಿಷನರ್ಗೂ ದೂರಿನ ಪ್ರತಿ ರವಾನೆ ಮಾಡಿದ್ದಾರೆ. ತನಿಖೆ ನಡೆದ್ರೆ ಸಿಐಡಿ ಅಧಿಕಾರಿಗಳ ತಲೆದಂಡ ಪಕ್ಕಾನಾ..? DySP ಶಂಕರಗೌಡ ಸೇರಿ CID ತನಿಖಾ ಟೀಂಗೆ ಸಂಕಷ್ಟ ಗ್ಯಾರೆಂಟಿನಾ..?