ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಬೆಳೆದು ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಕನ್ನಡದಲ್ಲೇ ಅವಕಾಶ ಪಡೆದು ಇಷ್ಟು ಬೇಗ ಹೀಗಾಗ್ಬಿಟ್ಟಿದ್ಧಾರೆ. ಇದು ನ್ಯಾಷನಲ್ ಕ್ರಶ್ ರಶ್ಮಿಕಾಗೆ ಸೇರಿದ ಬಿಗ್ ಮ್ಯಾಟರ್ ಆಗಿದೆ. ಸಿನಿಮಾ ಅವಕಾಶ ಕೊಟ್ಟವರನ್ನೇ ಮರೆತ್ರಾ ರಶ್ಮಿಕಾ..? ರಶ್ಮಿಕಾ ಮಂದಣ್ಣ ಅವರ ಫ್ರೆಂಡ್ಶಿಪ್ ಡೇಗೆ ಅಸಲಿ ಕಹಾನಿ ರಿವೀಲ್ ಮಾಡಿದ್ಧಾರೆ.
ರಶ್ಮಿಕಾ ಫ್ರೆಂಡ್ಶಿಪ್ ಡೇಗೆ ಫೋಟೋ ಅಪ್ಲೋಡ್ ಮಾಡಿದ್ಧಾರೆ. ಹಲವು ಗೆಳೆಯರ ಫೋಟೋ ಅಪ್ಲೋಡ್ ಮಾಡಿದ್ದು, ವಿಜಯ್ ದೇವರಕೊಂಡ ಫೋಟೋ ಕೂಡ ಅಪ್ಲೋಡ್ ಮಾಡಿದ್ಧಾರೆ. ಆದ್ರೆ ರಕ್ಷಿತ್ ಶೆಟ್ಟಿ ಫೋಟೋ ಹಂಚಿಕೊಳ್ಳದೇ ಇದ್ಧಾರೆ. ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಗೆಳೆಯರ ಫೋಟೋ ಹಾಕಿ ಭಾವುಕರಾಗಿ, ನನ್ನ ಹೃದಯದ ಗೆಳೆಯರು ಎಂದು ಬರೆದಿದ್ಧಾರೆ. ವಿಜಯ್ ಸೇರಿ ಹಲವರ ಫೋಟೋ ಹಂಚಿಕೊಂಡಿದ್ಧಾರೆ. ರಶ್ಮಿಕಾ ಫೋಟೋದಿಂದ ಭಾರೀ ಚರ್ಚೆ ಶುರುವಾಗಿದೆ. ರಕ್ಷಿತ್ ಶೆಟ್ಟಿ ಬಿಟ್ಟು ಉಳಿದವರು ಮಾತ್ರ ರಶ್ಮಿಕಾ ಗೆಳೆಯರಾ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿನಾ ಮರೆತೇ ಬಿಟ್ರಾ ಎಂಬ ಪ್ರಶ್ನೆ ಮೂಡುತ್ತಿದೆ.
ರಕ್ಷಿತ್ ಶೆಟ್ಟಿ ಅವರೇ ರಶ್ಮಿಕಾರನ್ನ ಇಂಡಸ್ಟ್ರೀಗೆ ಪರಿಚಯಿಸಿದ್ದರು. ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದಿಂದ ಕ್ಲಿಕ್ ಆಗಿದ್ದರು. ಸಿನಿಮಾ ಟೈಮ್ನಲ್ಲಿ ರಕ್ಷಿತ್-ರಶ್ಮಿಕಾ ನಡುವೆ ಲವ್ ಇತ್ತು, ಈ ನಟ-ನಟಿ ಅದ್ಧೂರಿಯಾಗಿ ಎಂಗೇಜ್ಮೆಂಟ್ ಮಾಡ್ಕೊಂಡಿದ್ದರು. ಇನ್ನೇನು ಮದುವೆ ಆಗ್ತಾರೆ ಅನ್ನುವಷ್ಟರಲ್ಲೇ ಬ್ರೇಕ್ ಅಪ್ ಮಾಡಿಕೊಂಡರು. ನಂತ್ರ ಟಾಲಿವುಡ್, ಬಾಲಿವುಡ್ನಲ್ಲಿ ರಶ್ಮಿಕಾ ಮಿಂಚಿಂಗ್ ಮಾಡುತ್ತಿದ್ಧಾರೆ. ಆದ್ರೆ ಫ್ರೆಂಡ್ಶಿಪ್ ಡೇಗೆ ವಿಶ್ ಮಾಡದೇ ಹೀಗ್ಯಾಕೆ ಮಾಡಿದ್ರು, ರಶ್ಮಿಕಾ ಹೃದಯದಲ್ಲಿ ರಕ್ಷಿತ್ ಶೆಟ್ಟಿಗೆ ಇಲ್ವಾ ಜಾಗ, ಸಿನಿಮಾಗೆ ಪರಿಚಯಿಸಿದ ರಕ್ಷಿತ್ನೇ ಸಾನ್ವಿ ಮರೆತ್ರಾ , ರಶ್ಮಿಕಾ ಫ್ರೆಂಡ್ಶಿಪ್ ಡೇ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ… ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿ ಮುದುವರಿಯೋದು ಅಷ್ಟೇ ಸತ್ಯ: ರೇಣುಕಾಚಾರ್ಯ…