ಬೆಂಗಳೂರು: ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ, ಬೊಮ್ಮಾಯಿ ಆಡಳಿತದ ಸರ್ಕಾರ 40 % ಕಮಿಷನ್ ಸರ್ಕಾರ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಎಂ.ಬಿ. ಪಾಟೀಲ್ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ರಣದೀಪ್ ಸುರ್ಜೆವಾಲಾ ಬಿಜೆಪಿ ಸರ್ಕಾರ ಜನರ ಮತಗಳಿಂದ ಅಧಿಕಾರಕ್ಎಕ ಬಂದಿಲ್ಲ, 20, 30, 50 ಕೋಟಿ ನೀಡಿ ಶಾಸಕರನ್ನು ಕೊಂಡು ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಗಳ ಮೂಗಿನ ಕೆಳಗೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ ಸಚಿವರ ವಿರುದ್ಧ ಪರ್ಸಂಟೇಜ್ ಬಾಂಬ್… ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಬಿಗಿ ಪಟ್ಟು…
ಕರ್ನಾಟಕದ ಗುತ್ತಿಗೆದಾರರು, ಸಚಿವರ ಮೇಲೆ 40% ಕಮಿಷನ್ ಪಡೆದ ಆರೋಪ ಮಾಡಿದ್ಧಾರೆ. 40% ಕಮಿಷನ್ ಸಚಿವರ ಜೇಬಿಗೆ ಹೋದರೆ, ಸರ್ಕಾರ ನಡೆಯುವುದು ಹೇಗೆ, ವೈಯಕ್ತಿಕ ಪಾಕೆಟ್ ಗೆ ಹಣ ಹೋದರೆ ಅಭಿವೃದ್ಧಿ ನಡೆಯುವುದಾದರೂ ಹೇಗೆ. ಈಗಾಗಲೇ ರಾಜ್ಯದ ಗುತ್ತಿಗೆದಾರರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ನಿಮ್ಮ ಸಚಿವರು 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ದೂರು ನೀಡಿದ್ಧಾರೆ. ಇದರ ಹೊರಗಾಗಿಯೂ ಪಿಎಂ ಮತ್ತು ಸಿಎಂ ಮೌನ ವಹಿಸಿದ್ದಾರೆ. ಎಸಿಬಿ, ಸಿಸಿಬಿ, ಸಿಬಿಐ, ಐಟಿ ಏನು ಮಾಡುತ್ತಿದೆ ಎಂದು ರಣದೀಪ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.