ಬೆಂಗಳೂರು: 2 ದಿನಗಳ ಹಿಂದೆ ಮೋಹಕ ತಾರೆ ರಮ್ಯಾ ಪೋಸ್ಟ್ ಮಾಡಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಮ್ಯಾ ಜೊತೆ ಇದ್ದ ಹುಡುಗ ಯಾರು ಎಂದು ಸಾಕಷ್ಟು ಚರ್ಚೆ ನಡೆದಿತ್ತು. ಇಗ ಸ್ವತಃ ರಮ್ಯಾ ಅವರೇ ಈ ಕುರಿತು ಮೌನ ಮುರಿದಿದ್ದು, ವೈರಲ್ ಫೋಟೋದಲ್ಲಿದ್ದ ಹುಡುಗನ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೊನ್ನೆ ರಮ್ಯಾ ಇನ್ಸ್ಟಾಗ್ರಾಂ ನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದರು. ಅದರಲ್ಲಿ ಯುವಕನೊಬ್ಬನ ಜೊತೆ ಸಖತ್ ಕ್ಲೋಸ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದರು. ರಮ್ಯಾ ಅಭಿಮಾನಿಗಳು ಆ ಹುಡುಗ ಯಾರು ಎಂದು ತಲೆಕೆಡಿಸಿಕೊಂಡಿದ್ದರು. ಈಗ ರಮ್ಯಾ ಈ ಸಂಬಂಧ ಟ್ವೀಟ್ ಮಾಡಿದ್ದು, ಆತ ವಿಹಾನ್, ನನ್ನ ಸ್ಟೈಲಿಸ್ಟ್ ಎಂದು ತಿಳಿಸಿದ್ದಾರೆ. ಈ ಮೂಲಕ ಎಲ್ಲಾ ಗಾಸಿಪ್ ಗಳಿಗೂ ರಮ್ಯಾ ತೆರೆ ಎಳೆದಿದ್ದಾರೆ.