ಮೈಸೂರು : ರಾಮದಾಸ್ ಬಳಿ ದುಡ್ಡಿದೆ.. ನನ್ನ ಸುಟ್ಟು ಹಾಕ್ತಾರೆ, ಅಷ್ಟೊಂದು ತಾಕತ್ತು ಇರುವವರಿಗೆ ನಾನು ಕಿರುಕುಳ ನೀಡಲು ಸಾಧ್ಯವೇ..? ಎಂದು ಶಾಸಕ ರಾಮದಾಸ್ ಮೇಲೆ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಬಿಜೆಪಿ ಸಂಸದ ತಮ್ಮದೇ ಪಕ್ಷದ MLA ಮೇಲೆ ಗುಡುಗಿದ್ಧಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಅವರು ರಾಮದಾಸ್ ಬಳಿಯಿರುವ ಹಣದಿಂದ ನನ್ನನ್ನು ಸುಟ್ಟು ಹಾಕಬಹುದು, ನಾವ್ಯಾರೂ ಅವರಿಗೆ ಕಿರುಕುಳ ನೀಡಲು ಹೋಗಿಲ್ಲ. ಸ್ವತಃ ಪ್ರಧಾನಿಗಳೇ ಅವರ ಬೆನ್ನು ತಟ್ಟಿದ್ದಾರೆ, ಪಕ್ಷ ಬಿಡಿಸಲು ಯಾರೂ ಕಿರುಕುಳ ನೀಡುತ್ತಿಲ್ಲ. ಅವರಿಗೆ ಕಿರುಕುಳ ಕೊಡುವಷ್ಟು ನಾವು ದೊಡ್ಡವರಾಗಿ ಬೆಳೆದಿಲ್ಲ, ಅವರ ಬಳಿ ಇರುವ ಹಣದಿಂದ ನನ್ನನ್ನು ಸುಟ್ಟುಹಾಕಬಹುದು. ಬಸ್ ನಿಲ್ದಾಣದ ಗೋಪುರ ಗುಂಬಜ್ ರೀತಿ ಕಾಣುತ್ತಿದೆ. ಇದನ್ನು ಕೆಡವಿದರೆ ಟಿಪ್ಪು ಅನುಯಾಯಿಗಳಿಗೆ ಅನ್ಯಾಯ ಆಗುತ್ತೆ. ಅಯೋಧ್ಯೆಯಲ್ಲಿ ಗುಂಬಜ್ ಬಿದ್ದ ಮೇಲೆ ರಾಮದಾಸ್ ಬಿಜೆಪಿ ಸೇರಿದವರು, ಹೀಗಾಗಿ ಗುಂಬಜ್ ಮಾದರಿ ಶೆಲ್ಟರ್ ತೆರವಿನಿಂದ ಅವರಿಗೆ ನೋವಾಗುತ್ತೆ ಎಂದಿದ್ಧಾರೆ. ರಾಮದಾಸ್ ನನಗೆ ಕೆಲಸ ಮಾಡಲು ಬಿಡ್ತಿಲ್ಲ.. ಕಿರುಕುಳು ನೀಡ್ತಿದ್ದಾರೆ ಎಂದಿದ್ದರು.
ಇದನ್ನೂ ಓದಿ : ಕಲಾಸಿಪಾಳ್ಯದಲ್ಲಿ ಬಾಂಬೆ ರೆಡ್ ಲೈಟ್ ಏರಿಯಾ ಮಾದರಿಯ ಸೀಕ್ರೆಟ್ ರೂಮ್.. ಮಹಿಳೆಯರಿನ್ನಿಟ್ಟು ಮಾಂಸದಂಧೆ..!