ಕಿರುತೆರೆಯ ಟಿವಿ ಶೋ ಬಿಗ್ ಬಾಸ್ ಸೀಸನ್ 09 ಬಾರಿ ಸದ್ದು ಮಾಡುತ್ತಿದ್ದು, ಈ ಮನೆಯಲ್ಲಿ ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ನಂತರ ಹೈಲೈಟ್ ಆಗಿರುವ ಮತ್ತೊಂದು ಜೋಡಿ ಅಂದ್ರೆ ಅದು ರಾಕೇಶ್ ಅಡಿಗ ಹಾಗೂ ಅಮೂಲ್ಯ ಗೌಡ ಆದರೆ ಇದೀಗ ಟೀ ವಿಚಾರಕ್ಕೆ ಮನಸ್ತಾಪ ಆಗಿ, ಬೇರೆ ಬೇರೆ ಆಗಿದ್ದಾರೆ.
ಹೌದು ದೊಡ್ಮನೆಯಲ್ಲಿ ಸೋನು ನಂತರ ರಾಕೇಶ್‌ಗೆ ಸಖತ್ ಕ್ಲೋಸ್ ಆಗಿರೋದೆ ಅಮೂಲ್ಯ ಗೌಡ ಮಾತ್ರ, ಮೊದಲಿ ನಿಂದಲೂ ಅಮ್ಮು ಮತ್ತೆ ರಾಕಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈಗ ಈ ಜೋಡಿಯ ನಡುವೆ ಬಿರುಕು ಬಂದಿದ್ದು ಟೀ ವಿಚಾರಕ್ಕೆ ಬ್ರೇಕಪ್ ಮಾಡಿಕೊಂಡಿದ್ದಾರೆ.
ಎಲ್ಲರಿಗೂ ಟೀ ಮಾಡೋದಾ ಅಥವಾ ಅವರವರೇ ಮಾಡಿಕೋತ್ತಾರಾ, ಎಂದು ರಾಕಿ ಮನೆ ಮಂದಿಗೆ ಕೇಳಿದ್ದಾರೆ. ಈ ಸಂಧರ್ಭದಲ್ಲಿ ನನಗೆ ಹಾಲಿಗೆ ಜಾಸ್ತಿ ನೀರು ಹಾಕಬೇಡಿ. ನನಗೆ ಒಂದು ಪ್ಯಾಕೇಟ್ ಹಾಲು ಕೊಟ್ಟು ಬಿಡಿ ಎಂದು ಅಮೂಲ್ಯ ಹೇಳಿದ್ದಾರೆ. ನನಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಅಮೂಲ್ಯ ರಾಕಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಗಮನಕ್ಕೆ ಬಂದಿಲ್ಲ ಎಂದ ರಾಕಿ ಮಾತಿಗೆ, ನಾನು ನಿಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದು ಹಿಂಸೆ ಆಯ್ತು. ನೀವು ಎರಡು ಹೆಜ್ಜೆ ಮುಂದೆ ಬಂದಿದ್ದರೆ ನಿಮ್ಮ ಇಗೋ ಕಮ್ಮಿಯಾಗುತ್ತಿರಲಿಲ್ಲ ಎಂದಿದ್ದಾರೆ. ಅಮೂಲ್ಯ ಬೆಸರಗೊಂಡು ನನಗೆ ಕಾಮನ್ ಸೆನ್ಸ್ ಇಲ್ಲಾ, ನಿಮ್ಮ ಅಷ್ಟು ಥಿಂಕಿಂಗ್ ಲೆವಲ್ ಇಲ್ಲ ಎಂದು ರಾಕಿ ಮುಂದೆ ಕಣ್ಣೀರಿಟ್ಟಿದ್ದಾರೆ.ಅಮ್ಮು ಮುನಿಸಿಗೆ ರಾಕಿ ಮನವೊಲಿಸಲು ಸೋತಿದ್ದಾರೆ.
ಇದನ್ನೂ ಓದಿ : Viral Video.. ತಲೆ ಮೇಲೆ ಬೈಕ್ ಹೊತ್ತು ಬಸ್ ಟಾಪ್ ಏರಿದ ಈ ಭೂಪ…