ಬೆಂಗಳೂರು: ರಾಕೇಶ್ ಅಡಿಗ‘ಬಿಗ್ ಬಾಸ್’ ಸುಂದರಿಯರನ್ನ ಭೇಟಿಯಾಗಿದ್ದು,ಆದ್ರೆ ಸೋನು ಮಿಸ್ ಆಗಿದ್ದಾರೆ. ರಾಕೇಶ್ ಅಡಿಗ ,ಅಮೂಲ್ಯ, ದಿವ್ಯಾ ಉರುಡುಗ , ನೇಹಾ ಗೌಡ ಮತ್ತು ಅನುಪಮಾ ಗೌಡ ಭೇಟಿಯಾಗಿದ್ದು, ಆ ಸಂಭ್ರಮವನ್ನು ಫೋಟೋ ಮೂಲಕ ಹಂಚಿಕೊಂಡಿದ್ದಾರೆ. ಈ ಭೇಟಿಯ ಹಿಂದಿನ ಉದ್ದೇಶ ಏನು?
ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಎಲ್ಲರ ಮೆಚ್ಚಿನ ಹುಡುಗ ಆಗಿದ್ದರು ಎಲ್ಲರೊಂದಿಗೂ ಅವರು ಸಲೀಸಾಗಿ ಹೊಂದಿಕೊಳ್ಳುತ್ತಿದ್ದರು. ಹಾಗಾಗಿಯೇ ರಾಕೇಶ್ ಮೇಲೆ ಕೆಲ ಗಾಸಿಪ್ಗಳು ಆಗಾಗ ಕೇಳಿಬರುತ್ತಿತ್ತು. ಅವೆಲ್ಲವನ್ನ ರಾಕೇಶ್ ತಳ್ಳಿಹಾಕಿದ್ದಾರೆ. ಕೆಲ ದಿನಗಳ ಹಿಂದೆ ಅಮೂಲ್ಯಗೌಡರನ್ನ ಮೀಟ್ ಮಾಡಿದ್ದಕ್ಕೆ ಇಬ್ಬರ ನಡುವೆ ಪ್ರೀತಿ ಪ್ರೇಮ ಇರಬಹುದು ಎಂದು ಊಹಿಸಲಾಗಿತ್ತು.
ಈ ಎಲ್ಲ ಗಾಸಿಪ್ ಗಳನ್ನು ಅವರು ನಿರಾಕರಿಸಿದ್ದು, ನಮ್ಮದು ಕೇವಲ ಫ್ರೆಂಡ್ ಶಿಪ್ ಅದರಾಚೆ ಏನೂ ಇಲ್ಲ ಎಂದು ಹೇಳಿದ್ದಾರೆ. ಅದೇ ಪ್ರೀತಿಯನ್ನೇ ಇಟ್ಟುಕೊಂಡು ಮತ್ತೆ ಸ್ನೇಹಿತಿಯರ ಜೊತೆ ರಾಕೇಶ್ ಒಂದಾಗಿದ್ದಾರೆ. ದೊಡ್ಮನೆಯಲ್ಲಿ ಈ ಜೋಡಿ ಒಂದಾಗಿಯೇ ಆಟವಾಡಿತ್ತು. ಆಚೆ ಬಂದ ನಂತರವೂ ಆ ಸ್ನೇಹವನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎನ್ನುವುದಕ್ಕೆ ಈ ಭೇಟಿಯೇ ಸಾಕ್ಷಿ.
ಇದನ್ನೂ ಓದಿ:ಮಂಡ್ಯ ರೈಲು ನಿಲ್ದಾಣದಲ್ಲಿ ಮನಕಲಕುವ ಘಟನೆ.. ಮಾಲ್ಗುಡಿ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವು…