ಬೆಂಗಳೂರು : ರಾಜಾನುಕುಂಟೆ ಯುವತಿ ರಾಶಿ ಹತ್ಯೆಗೆ ಕಿಚ್ಚಿನ ಜ್ವಾಲೆ ಎದಿದ್ದು, ಯುವತಿ ಕೊಂದ ಪಾಪಿ ವಿರುದ್ಧ ಕೆಲವರ ಆಕ್ರೋಶ ಹೊರಹಾಕಿದ್ದಾರೆ. ಭೀಕರವಾಗಿ ಹತ್ಯೆ ಮಾಡಿದ ಪಾಗಲ್ ಪ್ರೇಮಿ ಮೇಲೆ ಸಿಟ್ಟು ಮಾಡಿಕೊಂಡಿದ್ದಾರೆ.
ಯುವತಿ ಸಾವಿನ ಕಿಚ್ಚಿನ ಜ್ವಾಲೆಯಾಗಿ ಆರೋಪಿ ಮನೆಗೆ ಕಲ್ಲು ಎಸೆದಿದ್ದಾರೆ. ಯಲಹಂಕದ ಅನಂತಪುರದಲ್ಲಿರೋ ಕಿರಾತಕನ ಮನೆಯಿದೆ.ಯುವತಿ ಮೇಲಿನ ಕೃತ್ಯಕ್ಕೆ ಕಳೆದ ಮಧ್ಯರಾತ್ರಿ ಮನೆಗೆ ಅಟ್ಯಾಕ್ ಮಾಡಲಾಗಿದೆ. ಪಾಗಲ್ ಪ್ರೇಮಿಯ ಮನೆಯಲ್ಲಿದ್ದ ಪತ್ನಿ, ಅಣ್ಣ, ತಂದೆಯಿದ್ದರು. ಹತ್ಯೆ ಕೇಸ್ ನೆಪದಲ್ಲಿ ಕೆಲವರು ದಾಳಿ ಮಾಡಿದ್ದಾರೆಂಬ ಆರೋಪ ಮಾಡಿದ್ದಾರೆ. ಪುಂಡರು ಬಾಗಿಲು ಒಡೆಯೋಕೆ ಯತ್ನಿಸಿದಾಗ ಕುಟುಂಬದವರು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಬರ್ತಿದ್ದಂತೇ ಸ್ಥಳದಿಂದ ಯುವಕರು ಎಸ್ಕೇಪ್ ಆಗಿದ್ದಾರೆ.