ಬೆಂಗಳೂರು: ರಣಭೀಕರ ಮಳೆಗೆ ರಾಜ್ಯದ ಜನ ಕಂಗಾಲಾಗಿದ್ದು, ಅಧಿಕಾರಿಗಳೊಂದಿಗೆ ಸಿಎಂ ತುರ್ತು ಮೀಟಿಂಗ್ ನಡೆಸಿದ್ದಾರೆ. ಹಾನಿ ಪ್ರದೇಶಕ್ಕೆ ಭೇಟಿ ನೀಡುವಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನ ತತ್ತರಿಸುತ್ತಿದ್ದು, ರಣಮಳೆಗೆ ಹಲವು ಪ್ರದೇಶಗಳಲ್ಲಿ ಹಾನಿಯುಂಟಾಗಿ, ಜನ ಕಂಗಾಲಾಗಿದ್ದಾರೆ. ಭಾರೀ ಮಳೆಗೆ ಕೆರೆ, ಡ್ಯಾಂಗಳು ತುಂಬಿ ಹರಿಯುತ್ತಿದ್ದು, ಈ ಹಿನ್ನೆಲೆ ಎಲ್ಲಾ ಡಿಸಿಗಳೊಂದಿಗೆ ಸಿಎಂ ಮೀಟಿಂಗ್ ಮಾಡಿದ್ದು, ಡಿಸಿ, ಎಸಿ, ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ದಾರೆ. 2-3 ದಿನಗಳಲ್ಲಿ ಹಾನಿಗೊಳಗಾದ ಸ್ಥಳಕ್ಕೆ ಭೇಟಿಗೆ ಸೂಚನೆ ಕೊಟ್ಟಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ.
3 ದಿನಗಳಲ್ಲಿ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಬೇಕು, ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕೆಲಸ ಮಾಡಿ. ಪ್ರವಾಹಕ್ಕೆ ಕುರಿತ ಫೈಲ್ಗಳನ್ನ ತಡ ಮಾಡದೇ ವಿಲೇವಾರಿ ಮಾಡಿ, ಪೂರ್ಣ ಹಾನಿಯಾಗಿರುವ ಮನೆಗಳಿಗೆ NDRFನಿಂದ ಕೂಡಲೇ ಪರಿಹಾರ ನೀಡಬೇಕು,ಮುಂದಿನ 15 ದಿನ ಯಾವುದೇ ಅಧಿಕಾರಿಗೆ ರಜೆ ಕೊಡುವಂತಿಲ್ಲ.ಹೀಗೆ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ಕೊಟ್ಟಿದ್ದಾರೆ.