ಬೆಂಗಳೂರು : ಐಟಿ ಸಿಟಿಯಲ್ಲಿ ಅಕ್ಷರಶಃ ಹಣದ ಮಳೆ ಸುರಿದಿದೆ. ಗರಿ-ಗರಿ ನೋಟು ಮಳೆ ಹನಿಯಂತೆ ಸುರಿದವು. ನೋಟಿನ ಕಂತೆ ನೋಡಿ ಜನರಿಗೆ ಕುತೂಹಲವೋ ಕುತೂಹಲ ಮೂಡಿಸಿದೆ. ನೋಟುಗಳನ್ನು ಆಯ್ದುಕೊಳ್ಳಲು ಜನರು ಮುಗಿಬಿದ್ದಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ಕೆ.ಆರ್ ಮಾರ್ಕೆಟ್ ಫ್ಲೈ ಓವರ್ ಮೇಲಿಂದ ಹಣದ ಮಳೆ ಸುರಿಸಿದ್ದು, 500, 200, 100 ರೂಪಾಯಿ ಎರಚಿದ್ದಾನೆ. ವ್ಯಕ್ತಿಯು ಸೂಟ್ ಧರಿಸಿ, ಕತ್ತಿಗೆ ಗಡಿಯಾರ ತಗ್ಲಾಕಿಕೊಂಡಿದ್ದಾನೆ. ವ್ಯಕ್ತಿ ಬ್ಯಾಗ್ನಲ್ಲಿ ಹಣ ತುಂಬಿಕೊಂಡು ಬಂದಿದ್ದಾನೆ. ವ್ಯಕ್ತಿ ಹಣ ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ. ಹಣದ ಮಳೆ ಸುರಿಸಿದ ವ್ಯಕ್ತಿಗೆ ಪೊಲೀಸರ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ : ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ… ಸರ್ಕಾರದ ಆದೇಶದಂತೆ ನಡೆದುಕೊಳ್ಳುತ್ತೇವೆ: ನಗರ ಜಿಲ್ಲಾಧಿಕಾರಿ ದಯಾನಂದ..!