ವಯನಾಡು: ವಯನಾಡಿನಲ್ಲಿರುವ ನನ್ನ ಕಚೇರಿ ಮೇಲೆ ನಡೆದ ದಾಳಿ ಒಂದು ದುರದೃಷ್ಟಕರ ಸಂಗತಿ, ಹಿಂಸೆಯಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಿಳಿಸಿದ್ಧಾರೆ.
ರಾಹುಲ್ ಗಾಂಧಿ ತಮ್ಮ ಸ್ವಕ್ಷೇತ್ರ ವಯನಾಡಿಗೆ 3 ದಿನಗಳ ಭೇಟಿಗಾಗಿ ತೆರಳಿದ್ದಾರೆ. ಅವರು ಇಂದು ವಯನಾಡಿನಲ್ಲಿ ರೋಡ್ ಶೋ ನಡೆಸಿ ಬಳಿಕ ತಮ್ಮ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ ‘ಎಸ್ ಎಫ್ ಐ ಸಂಘಟನೆಯ ಕಾರ್ಯಕರ್ತರು ನನ್ನ ಕಚೇರಿಯ ಮೇಲೆ ದಾಳಿ ನಡೆಸಿರುವುದು ದುರದೃಷ್ಟಕರ, ಹಿಂಸೆಯಿಂದ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ನನಗೆ ಅವರ ಕುರಿತು ಕೋಪವಿಲ್ಲ. ಪ್ರಸ್ತುತ ದೇಶದಲ್ಲಿ ಹಿಂಸೆಯಿಂದ ಸಮಸ್ಯೆಯನ್ನು ಬಗೆಹರಿಸಬಹುದು ಎಂಬ ಮನಸ್ಥಿತಿ ಹೆಚ್ಚುತ್ತಿದೆ. ಹಿಂಸಾಚಾರ ಒಳ್ಳೆಯದಲ್ಲ. ಎಸ್ ಎಫ್ ಐ ಕಾರ್ಯಕರ್ತರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ತಿಳಿಸಿದ್ಧಾರೆ.
'ഇത് എന്റെ ഓഫീസാണ്. പക്ഷേ അതിനും മുൻപ് ഇത് വയനാട്ടിലെ ജനങ്ങളുടെ ഓഫീസ് ആണ്. വയനാട്ടിലെ ജനങ്ങളുടെ ശബ്ദമാണ്. അക്രമം ഒരു പ്രശ്നവും പരിഹരിക്കില്ല. ഇത് ചെയ്ത കുട്ടികൾ നിരുത്തരവാദപരമായാണ് പെറുമാറിയതെങ്കിലും എനിക്കവരോട് വെറുപ്പോ ശത്രുതയോ ഇല്ല.' pic.twitter.com/GXT636LjXl
— Rahul Gandhi – Wayanad (@RGWayanadOffice) July 1, 2022
ಕಳೆದ ವಾರ ಎಸ್ ಎಫ್ ಐ ಕಾರ್ಯಕರ್ತರು ವಯನಾಡಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ರಾಹುಲ್ ಗಾಂಧಿ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು ಮತ್ತು ಕಚೇರಿಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದರು. ಜೊತೆಗೆ ಈ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಕೇರಳದಾದ್ಯಂತ ಪ್ರತಿಭಟನೆ ನಡೆಸಿತ್ತು.