ಬೆಂಗಳೂರು : RT ನಗರ ಗಲ್ಲಿ-ಗಲ್ಲಿಯಲ್ಲೂ ಗಾಂಜಾ ಘಮಲು ಬರುತ್ತಿದ್ದು, ಪೆಟ್ಟಿಗೆ ಅಂಗಡಿಗಳಲ್ಲೂ ಗಾಂಜಾ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ.
ಚಾಕೊಲೇಟ್ ಕವರ್ನಲ್ಲೇ ಗಾಂಜಾ ಪಿಲ್ಸ್ ಮಾರಾಟ ಮಾಡಲಾಗುತ್ತಿದ್ದು, ಸಾಯ್ ಹೆಸರಿನ ಚಾಕೊಲೇಟ್ ಕವರ್ನಲ್ಲಿ ಬಾಂಗ್ ಸೇಲ್ ಮಾಡಲಾಗುತ್ತಿದೆ. ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಗಾಂಜಾ ಡೀಲ್ ಮಾಡುತ್ತಿರುವುದು ಪತ್ತೆಯಾಗಿದ್ದು, ಒಟ್ಟು 5 ಕೆಜಿ ಗಾಂಜಾ ಟ್ಯಾಬ್ಲೆಟ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಕೊಲೇಟ್ ಕವರ್ನಲ್ಲಿ ಸುತ್ತಿಟ್ಟಿದ್ದ 900 ಪಿಲ್ಸ್ ವಶಕ್ಕೆ ಪಡೆಯಲಾಗಿದ್ದು, 50-100 ರೂಪಾಯಿಗೆ ಗಾಂಜಾ ಟ್ಯಾಬ್ಲೆಟ್ಗಳನ್ನ ಆರೋಪಿಗಳು ಮಾರುತ್ತಿದ್ದರು, ಪ್ರತಿ ದಿನ ಕೆಜಿ-ಕೆಜಿ ಗಾಂಜಾ ಟ್ಯಾಬ್ಲೆಟ್ಗಳನ್ನ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಬಂದಿಸಿದ್ದು, ವಿಚಾರಣೆ ಮಾಡುತ್ತಿದ್ದಾರೆ.