ಬೆಂಗಳೂರು: ಕಾಂಗ್ರೆಸ್ ಪಕ್ಷದ ಬಯಲಾಟ ಬೀದಿಗೆ ಬಂದಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ರಮ್ಯಾ ವೇದಿಕೆ ಸಿದ್ದಪಡಿಸಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ರಮ್ಯಾ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಟ್ವೀಟ್ ವಾರ್ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್ ಅವರು ‘ಕಾಂಗ್ರೆಸ್ ನಲ್ಲಿ ಬೆಂಕಿ ಹೊಗೆಯಾಡುತ್ತಿದೆ, ಅದು ರಷ್ಯಾ, ಉಕ್ರೇನ್ ಯುದ್ಧಕ್ಕಿಂತ ಹೆಚ್ಚಾಗಿದೆ. ದೆಹಲಿಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ. ಈಗ ಇಲ್ಲಿ ನೀನೇ ಸಾಕಿದ ಗಿಣಿ ಬಂಡಾಯ ಸಾರಿದೆ.
ಇದನ್ನೂ ಓದಿ: ಪಕ್ಷದ ಆಂತರಿಕ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಮಾತನಾಡೋ ಅವಶ್ಯಕತೆ ಏನಿತ್ತು: ಮೊಹಮ್ಮದ್ ನಲಪಾಡ್…
ಕಾಂಗ್ರೆಸ್ ನಲ್ಲೇ ಎರಡು ಟೀಂ ಆಗಿದೆ, ಒಂದು ಅಧ್ಯಕ್ಷರ ಮತ್ತು ನಲಪಾಡ್ ಟೀಂ ಮತ್ತೊಂದು ರಮ್ಯಾ ಬೆಂಬಲಿಗರ ಟೀಂ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ರಮ್ಯಾ ವೇದಿಕೆ ಸಿದ್ಧಪಡಿಸಿದ್ದಾರೆ.ಟ್ವೀಟ್ ಮೂಲಕ ಅಧ್ಯಕ್ಷರಿಗೆ ಇರಿಸುಮುರಿಸು ಉಂಟು ಮಾಡಿದ್ಧಾರೆ.
ಈ ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಬಾಗಿಲು ಇದ್ದವು. ಈಗ ಮತ್ತೊಂದು ಬಾಗಿಲು ಓಪನ್ ಆಗಿದೆ. ರಮ್ಯಾಜಿ ಅವರು ಮೂರನೇ ಬಾಗಿಲು ತೆರೆದಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಬಿಜೆಪಿ ಪಕ್ಷದ ಬಾಗಿಲು ಎಲ್ಲರಿಗೂ ಮುಕ್ತವಾಗಿ ತೆರೆದಿದೆ. ಯಾರು ಬೇಕಾದರೂ ಬರಹುದು ಎಂದು ಅಶೋಕ್ ತಿಳಿಸಿದ್ದಾರೆ.