ಬೆಂಗಳೂರು: ಸಮಾಜ ಘಾತುಕ ಶಕ್ತಿಗಳು ಶೋ ಕೊಡೋದು ಬೇಡ, ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅಶೋಕ್ ಅವರು ಸಮಾಜ ಘಾತುಕ ಶಕ್ತಿಗಳು ಶೋ ಕೊಡೋದು ಬೇಡ, ಮಾಧ್ಯಮಗಳಲ್ಲಿ ಹೇಳಿಕೆ ಕೊಡುವುದು ಸರಿಯಲ್ಲ. ಕಾನೂನು ಸುವ್ಯವಸ್ಥೆ ಯಾರೇ ಕದಡಿದ್ರೆ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಸಂಘಟನೆ ಆದ್ರೂ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆ.
ಇದನ್ನೂ ಓದಿ: ಮುಸ್ಲಿಮರ ಮೈಕ್ ವಿರುದ್ಧ ನಿಮ್ಮ ದಾದಾಗಿರಿ ತೋರಿಸಿ… ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ…
ಸುಪ್ರೀಂಕೋರ್ಟ್ ಆದೇಶ ಎಲ್ಲರೂ ಪಾಲನೆ ಮಾಡಬೇಕು. ಯಾರಾದರೂ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಿಲ್ಲ ಅಂದ್ರೆ ದೂರು ಕೊಡಲಿ. ನಂತರ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಅದು ಬಿಟ್ಟು ಶಾಂತಿ, ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡಬಾರದು. ಕೋಮು, ಸೌಹಾರ್ದಕ್ಕೆ ಧಕ್ಕೆ ಮಾಡಿದ್ರೆ ಅಂತಹವರ ವಿರುದ್ದ ಕ್ರಮ ಗ್ಯಾರಂಟಿ ಎಂದು ಅಶೋಕ್ ತಿಳಿಸಿದ್ದಾರೆ.