ನವದೆಹಲಿ: ಪಂಜಾಬ್ ನ ಫಿರೋಜ್ ಪುರದ ಬಳಿಯ ಫ್ಲೈಓವರ್ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುಮಾರು 20 ನಿಮಿಷ ಸಿಲುಕಿಕೊಂಡಿದ್ದರು. ಅಂದು ಅವರ ಮೇಲೆ ಟಾರ್ಗೆಟ್ ಮಾಡಲಾಗಿತ್ತು ಎಂಬಂತಹ ಆನಿಮೇಟೆಡ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಂಜಾಬ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದ ವೇಳೆ ಭದ್ರತಾ ವೈಫಲ್ಯದಿಂದ ಮೋದಿ ಫಿರೋಜ್ಪುರ್ ಫ್ಲೈ ಓವರ್ ಮೇಲೆ 20 ನಿಮಿಷ ಕಾಯುವಂತಹ ಪರಿಸ್ಥಿತಿ ಎದುರಾಗಿತ್ತು. 2020ರಲ್ಲಿ ಆನಿಮೇಟೆಡ್ ವಿಡಿಯೋ ತಯಾರಿಸಲಾಗಿತ್ತು. ಅದರಲ್ಲಿ ಪ್ರಧಾನಿ ಮೋದಿಯವರಿಗೆ ಘೇರಾವ್ ಹಾಕುವ ದೃಶ್ಯವಿದೆ. ಈಗ ಈ ಆನಿಮೇಟೆಡ್ ವಿಡಿಯೋ ವೈರಲ್ ಆಗಿದ್ದು, ಜನವರಿ 5 ರಂದು ಇದೇ ಮಾದರಿಯಲ್ಲಿ ಪ್ರಧಾನಿ ಮೋದಿ ಅವರ ಮೇಲೆ ಪಂಜಾಬ್ ಫ್ಲೈಓವರ್ ನಲ್ಲಿ ದಾಳಿ ನಡೆಸಲು ಪ್ಲಾನ್ ಆಗಿತ್ತಾ, ಅವರನ್ನು ಟಾರ್ಗೆಟ್ ಮಾಡಲಾಗಿತ್ತಾ ಅನ್ನುವ ಚರ್ಚೆ ಹುಟ್ಟುಹಾಕಿದೆ.
ಪ್ರಧಾನಿಯ ಭದ್ರತೆಯಲ್ಲಿ ಲೋಪ ಉಂಟಾದ ವಿಚಾರ ಸಂಚಲನ ಮೂಡಿಸಿರುವ ಹೊತ್ತಿನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಫ್ಲೈ ಓವರ್ ಒಂದರ ಮೇಲೆ ವೆಹಿಕಲ್ ತಡೆದು ಟಾರ್ಗೆಟ್ ಮಾಡುವ ವಿಡಿಯೋವೊಂದು ಬಿಡುಗಡೆಯಾಗಿದ್ದು, ಈ ವಿಡಿಯೋ ಮಾದರಿಯಲ್ಲೇ ಅವತ್ತು ಟಾರ್ಗೆಟ್ ಆಗಿತ್ತಾ ಅಂತಾ ಪ್ರಶ್ನೆ ಹುಟ್ಟುಹಾಕಿದೆ. ಜೊತೆಗೆ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ : #Flashnews ಕಂದಾಯ ಸಚಿವ ಆರ್ ಅಶೋಕ್‌ಗೆ ಕೊರೋನಾ ಪಾಸಿಟಿವ್… ಆಸ್ಪತ್ರೆಗೆ ದಾಖಲು…