ಉಡುಪಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಹಪ್ಪಳ ಮಾರುತ್ತಿದ್ದ ಕುಟುಂಬದ ಹುಡುಗಿ ಸೆಕೆಂಡ್ ರ‍್ಯಾಂಕ್ ಬಂದಿದ್ದಾರೆ. ಉಡುಪಿಯ ಭವ್ಯ ನಾಯಕ್ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸೈನ್ಸ್ ನಲ್ಲಿ 600 ಕ್ಕೆ 597 ಅಂಕಗಳಿಸಿದ್ದಾರೆ.
ಹಪ್ಪಳ ಮಾರಾಟ ಮಾಡುವವರ ಪುತ್ರಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಭವ್ಯ ನಾಯಕ್ ಉಡುಪಿಯ ಪುತ್ತೂರಿನ ನಿವಾಸಿಯಾಗಿದ್ದಾರೆ. ನಾರಾಯಣ ಉಮಾ ನಾಯಕ್ ದಂಪತಿ ಪುತ್ರಿ ಭವ್ಯರಾಗಿದ್ದಾರೆ. ನಾರಾಯಣ ನಾಯಕ್ ಹಪ್ಪಳ ಮಾರಾಟ ಮಾಡಿ ಮಗಳನ್ನ ಓದಿಸಿದ್ದಾರೆ. ಭವ್ಯ ಸಿಇಟಿ ಬರೆದಿದ್ದೇನೆ ಭವಿಷ್ಯದಲ್ಲಿ ಇಂಜಿನಿಯರ್ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಭವ್ಯ ನಾಯಕ್ ಪೋಷಕರು ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ.