ಬೆಂಗಳೂರು: ರಾಜ್ಯದಲ್ಲಿ PUC ಪಠ್ಯ ದಂಗಲ್ ಶುರುವಾಗಿದ್ದು, ಶಾಲೆ ಆಯ್ತು, ಈಗ PUC ಪಠ್ಯ ಪರಿಷ್ಕರಣೆ ಸರದಿ ಯಾಗಿದೆ. PUC ಪಠ್ಯ ಪರಿಷ್ಕರಣೆಗೆ ಮತ್ತೆ ಚಕ್ರತೀರ್ಥ ನೇಮಕ ಮಾಡಲಾಗಿದ್ದು, 2ನೇ PUC ಪಠ್ಯ ತಿದ್ದುಪಡಿಗೆ ಸರ್ಕಾರ ರೆಡಿಯಾಗುತ್ತಿದೆ.
ಅಧ್ಯಾಯ 4.2 ಹೊಸ ಧರ್ಮಗಳ ಉದಯ ತಿದ್ದುಪಡಿಗೆ , ಚಕ್ರತೀರ್ಥ ಪರಿಷ್ಕೃತ ಪಠ್ಯವನ್ನ ಸರ್ಕಾರಕ್ಕೆ ನೀಡಲಿದ್ದಾರೆ. ಈ ಹಿನ್ನೆಲೆ ಪ್ರತಿಭಟನೆಗೆ ಕಾರಣವಾಗುತ್ತಾ ವಿವಾದಿತ ವ್ಯಕ್ತಿಯ ಮರುನೇಮಕ..? ಸರ್ಕಾರವೇ ಬೇಕಂತಲೇ ಪದೇ ಪದೇ ವಿವಾದ ಸೃಷ್ಠಿಸ್ತಿದ್ಯಾ..? ಎಂದು ಕಾದು ನೋಡಬೇಕಾಗಿದೆ. ಸಮಿತಿ ವಿಸರ್ಜಿಸಿ PUC ಪರಿಷ್ಕರಣೆಗೆ ಚಕ್ರತೀರ್ಥ ನೇಮಕ ಮಾಡಲಾಗಿದ್ದು, PUC ಪಠ್ಯ ಪರಿಷ್ಕರಣೆಯಿಂದ ನಾನು ಹಿಂದೆ ಸರಿಯೋದಿಲ್ಲ ,ಪಠ್ಯ ಪರಿಷ್ಕರಣೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ. ಮೊನ್ನೆಯಷ್ಟೇ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜಿಸಲಾಗಿದ್ದು, ಈಗ ನಿರ್ಗಮಿತ ಅಧ್ಯಕ್ಷ ರೋಹಿತ್ ಚಕ್ರತೀರ್ಥರಿಗೆ ಮತ್ತೊಂದು ಜವಾಬ್ದಾರಿ ನೀಡಲಾಗಿದೆ.
ಇದನ್ನೂ ಓದಿ:4 ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಟೆಕ್ಕಿ ನೇಣಿಗೆ ಶರಣು..!