ವಿಜಯಪುರ: ಪಿಎಸ್‌ಐ ಪುತ್ರನ ಹತ್ಯೆಯ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್.ಡಿ. ಆನಂದಕುಮಾರ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಎಸ್ಪಿ ಎಚ್.ಡಿ. ಆನಂದಕುಮಾರ್, ಮಾಜಿ ಮಹಾನಗರ ಪಾಲಿಕೆ ಸದಸ್ಯ ರೌಫ್ ಶೇಖ್, ರೌಫ್ ಪುತ್ರ ಆತಿಫ್ ಶೇಖ್, ವಿಲಾಸ್ ರಾಠೋಡ್, ಅನೀಲ್ ಚೌಹಾನ್ ನನ್ನ ಬಂಧಿಸಲಾಗಿದ್ದು, ನಗರದ ರೇಡಿಯೋ ಕೇಂದ್ರದ ಬಳಿ ಫೆಬ್ರವರಿ 15ರಂದು ಪಿಎಸ್ಐ ಪುತ್ರ ಮುಸ್ತಕಿನ್ ಕೂಡಗಿ ಬೈಕ್‌ಗೆ ಅಪಘಾತ ಮಾಡಿ ಬಳಿಕ ಹತ್ಯೆಗೈದು ಪರಾರಿಯಾಗಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಿ ದರ್ಗಾ ಜೈಲ್‌ಗೆ ಕಳುಹಿಸಲಾಗಿದೆ. ಇನ್ನು ವಿಲಾಸ್ ರಾಠೋಡ್, ಅನೀಲ್ ಚೌಹಾನ್ ಕಾಂಟ್ರಾಕ್ಟ್ ಕಿಲ್ಲರ್ಸ್ ಗಳಾಗಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.



ಇದನ್ನೂ ಓದಿ: ವಾರ್ ಘೋಷಿಸುತ್ತಿದ್ದಂತೆ ರಷ್ಯಾ ಮೇಲೆ ಅಮೆರಿಕ ಕೆಂಡ..! ಪುಟಿನ್ ಮೇಲೆ ಮುಗಿಬಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್..!
