ಬೆಂಗಳೂರು : PSI ನೇಮಕಾತಿ ವಿಚಾರದಲ್ಲಿ ಯಾರಿಗೂ ಸಹಾಯ ಮಾಡಿಲ್ಲ, ವಿಪಕ್ಷ ನಾಯಕರು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ನಾನು ನಾಯಕ ಆಗ್ತಿದ್ದೇನೆಂದು ಈ ಕುತಂತ್ರ ಮಾಡುತ್ತಿದ್ದಾರೆ. KPCC ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದಂತೆಯೇ ತನಿಖೆ ಆಗಲಿ. ಉಪ್ಪು ತಿಂದವರು ನೀರು ಕುಡಿಬೇಕು.. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಕಾಂಗ್ರೆಸ್ ಆರೋಪಕ್ಕೆ ಸಚಿವ ಅಶ್ವತ್ಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಅಶ್ವತ್ಥ್ ನಾರಾಯಣ್ ‘ನಾನು ಭ್ರಷ್ಟಾಚಾರ ಮಾಡಲು ರಾಜಕೀಯಕ್ಕೆ ಬಂದಿಲ್ಲ. ನಾನು ಸಿಎಂ ಆಗ್ತೀನಿ ಅನ್ನೋ ಭಯ ಡಿ.ಕೆ ಶಿವಕುಮಾರ್ ಗೆ ಇದೆ. ಡಿ.ಕೆ. ಶಿವಕುಮಾರ್ ಅಪಾರ್ಥ ಕಲ್ಪಿಸೋ ಹೇಳಿಕೆ ನೀಡ್ತಿದ್ದಾರೆ. ನನ್ನ ವಿರುದ್ಧ ಆರ್ಗನೈಸ್ಡ್ ಆಗಿ ಪಿತೂರಿ ಮಾಡಲಾಗಿದೆ. ಮ್ಯಾಚ್ ಫಿಕ್ಸಿಂಗ್ ಮಾಡಿ ಆರೋಪ ಮಾಡ್ತಿದ್ದಾರೆ, ಡಿ.ಕೆ. ಶಿವಕುಮಾರ್ ಬಂಡವಾಳ ನಾನು ಬಿಚ್ಚಿಡ್ತೀನಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಸತೀಶ್ ಅನ್ನೋರು ನನ್ನ ಅಣ್ಣ ಅನ್ನೋದು ನಿಜ. ಆದ್ರೆ ನನ್ನ ಅಣ್ಣ ಸತೀಶ್ ಮೇಲೆ ಯಾವುದೇ ಆರೋಪ ಇಲ್ಲ. ನನ್ನಣ್ಣ ಸತೀಶ್ ಹಗರಣದಲ್ಲಿ ಭಾಗಿಯಾಗಿರೋ ಬಗ್ಗೆ ಸಾಕ್ಷ್ಯ ಏನಿದೆ? ಮೂರು ಬಿಟ್ಟವರು ಸೂಕ್ಷ್ಮತೆ ಇಲ್ಲದೇ ಆರೋಪ ಮಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ನನಗನ್ನಿಸಿದಂತೆ ಮುಖ್ಯಮಂತ್ರಿ ಬದಲಾವಣೆ ಇಲ್ಲ… ಬೊಮ್ಮಾಯಿ ಒಳ್ಳೆ ಕೆಲಸ ಮಾಡ್ತಿದ್ದಾರೆ: ಬಿ.ಎಸ್. ಯಡಿಯೂರಪ್ಪ..!