ಚಿಕ್ಕಮಗಳೂರು : ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ PSI ಪತಿಯನ್ನ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
ಪಂಚನಹಳ್ಳಿ PSI ಲೀಲಾವತಿ ಅನ್ನೋರ ಪತಿ ರಾಜಪ್ಪ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ
ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ರಾಜಪ್ಪ ಕಡೂರಿನಿಂದ ಸಿದ್ದರಹಳ್ಳಿಗೆ ಶಿಕ್ಷಕಿಯರನ್ನ ಕರೆತರುತ್ತಿದ್ದ.
ಈ ವೇಳೆ ಶಾಲೆ ಬಳಿಯೇ ಇದ್ದು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಗ್ರಾಮಸ್ಥರು ಕಾಮುಕ ರಾಜಪ್ಪನನ್ನ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಶಾಲೆ ಬಳಿ ಇದ್ದು ಕಿರುಕುಳ ನೀಡುತ್ತಿದ್ದ. ಈ ಘಟನೆ ಕಡೂರು ತಾಲೂಕಿನ ಸಿದ್ದರಹಳ್ಳಿಯಲ್ಲಿ ನಡೆದಿದ್ದು, ಈ ಪ್ರಕರಣ ಸಖರಾಯಪಟ್ಣಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರು : BWSSB ಕಾಮಗಾರಿ ವೇಳೆ ಸಿಮೆಂಟ್ ಸ್ಲಾಬ್ ಬಿದ್ದು ಓರ್ವ ಕಾರ್ಮಿಕ ಸಾವು..!