ಬೆಂಗಳೂರು : ತೌಸಿಫ್ ಪಾಷಾ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಟರಾಯನಪುರ PSI ಹರೀಶ್ ಸಸ್ಪೆಂಡ್ ಆಗಿದ್ದಾರೆ. ತೌಸಿಫ್ನನ್ನ ಠಾಣೆಗೆ ಕರೆತಂದು PSI ಹರೀಶ್ ಹಲ್ಲೆ ನಡೆಸಿದ್ದಾರೆಂದು PSI ವಿರುದ್ಧ ತೌಸಿಫ್ ಕುಟುಂಬಸ್ಥರು ಆರೋಪಿಸಿದ್ದರು, ಅಲ್ಲದೇ, PSI ವಿರುದ್ಧ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ಗೆ ದೂರು ಸಹ ನೀಡಿದ್ದರು, ಹಲ್ಲೆ ಪ್ರಕರಣ ಸಂಬಂಧ ಇಲಾಖಾ ತನಿಖೆ ನಡೆಸಿದ್ದ ಡಿಸಿಪಿ, ತನಿಖೆಯಲ್ಲಿ ಹರೀಶ್ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಸಸ್ಪೆಂಡ್ ಮಾಡಿದ್ದಾರೆ. ಈ ಬಗ್ಗೆ BTvಗೆ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.