ಬೆಂಗಳೂರಿನಲ್ಲಿ ಡಕಾಯಿತಿ ಪ್ರಕರಣದಲ್ಲಿ PSI ಅರೆಷ್ಟ್ ಆಗಿದ್ದಾರೆ. ಅರೆ ಇದೇನಿದು PSI ಬಂಧನವಾಯ್ತಾ ಅಂತಿದ್ದೀರಾ ? ಹೌದು. 2017 ನೇ ಬ್ಯಾಚ್ ನ ಪಿಎಸ್ ಐ ಆಗಿದ್ದ ಜೀವನ್ S J ಪಾರ್ಕ್ ಪೋಲೀಸ್ ಠಾಣೆಯ ಪಿ ಎಸ್ ಐ ಆಗಿದ್ರು.
ಶಿವಪ್ರಕಾಶ್ ಎಂಬುವವರು ಅಗಷ್ಟ್ 19 ರಂದು ತಮ್ಮ ವ್ಯವಹಾರದ ಹಣವನ್ನು ಬೆಂಗಳೂರಿರಿನ ಚಿಕ್ಕಪೇಟೆಯಿಂದ ತೆಗೆದುಕೊಂಡು ಹೋಗ್ತಿದ್ದರು. ಇದೇ ವೇಳೆ ಜ್ನಾನಕುಮಾರ್ ಹಾಗೂ PSI ಜೀವನ್ ಸೇರಿ 6 ಮಂದಿ ತಾವು ಪೋಲೀಸ್ ಎಂದು ಬೆದರಿಸಿ ಶಿವಕುಮಾರ್ ಬಳಿಯಿಂದ 26.5 ಲಕ್ಷವನ್ನು ದೋಚಿದ್ದಾರೆ.
ಈ ಸಂಬಂಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಶಿವಕುಮಾರ್ ದೂರು ನೀಡಿದ್ದರು. ಪ್ರಕರಣವನ್ನು ಬೇಧಿಸಲು ಡಿಸಿಪಿ ಸಂಜೀವ ಪಾಟೀಲ್ ವಿಶೇಷ ತಂಡವನ್ನು ರಚಿಸಿತ್ತು. ಈ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಪಿ ಎಸ್ ಐ ಜೀವನ್ ಸೇರಿದಂತೆ 6 ಜನರನ್ನು ಬಂಧಿಸಿದೆ.