ಬೆಂಗಳೂರು : ಇಂದು ರಾಜ್ಯಾದ್ಯಂತ ಸಾರಿಗೆ ನೌಕರರ ಪ್ರೊಟೆಸ್ಟ್ ನಡೆಸಲಿದ್ದು, ರಾಜ್ಯಾದ್ಯಂತ ಇಂದು ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆಯಿದೆ. ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಸಾರಿಗೆ ನೌಕರರ ಪ್ರತಿಭಟನೆ ನಡೆಸಲಿದ್ದಾರೆ.
ಕೆಎಸ್ಆರ್ಟಿಸಿ , ಬಿಎಂಟಿಸಿ, ವಾಯುವ್ಯ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ನೌಕರರಿಂದ ಪ್ರೊಟೆಸ್ಟ್ ನಡೆಸಲಿದ್ದಾರೆ. ಜಿಲ್ಲೆಗಳಲ್ಲಿ ನಾಲ್ಕು ನಿಗಮದ ವಿಭಾಗೀಯ ಕಚೇರಿ ಮುಂದೆ ಧರಣಿ ಹಾಗೂ ಬಿಎಂಟಿಸಿ ನೌಕರರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಮಾಡಲಿದ್ದಾರೆ. ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತಸುಬ್ಬರಾವ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಿದ್ದು, ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಆರಂಭವಾಗಲಿದ್ದು, ಹೆಚ್ಚಿನ ನೌಕರರು ಧರಣಿ ಸತ್ಯಾಗ್ರಹ ದಲ್ಲಿ ಭಾಗಿಯಾಗ್ತಿರೋದ್ರಿಂದ ಬಸ್ ಸಂಚಾರ ವ್ಯತ್ಯಯ ಸಾಧ್ಯತೆಯಿದೆ.
ನೌಕರರು ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2021 ರ ಏಪ್ರಿಲ್ ನಲ್ಲಿ 15 ದಿನಗಳ ಕಾಲ ಮುಷ್ಕರ ನಡೆಸಿದ್ದರು. ಆದ್ರೂ ಇಲ್ಲಿಯವರೆಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಹೀಗಾಗಿ ಮತ್ತೆ ಸಾರಿಗೆ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುತ್ತಿದ್ದ ನಿಗಮಗಳು ಆರು ವರ್ಷ ಕಳೆದರೂ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪ ಇಲ್ಲ, ನಿಯಮಬದ್ಧ ವಾಗಿ 2020 ಮಾರ್ಚ್ ನಲ್ಲಿ ವೇತನ ಪರಿಷ್ಕರಣೆಯಾಗಬೇಕಿತ್ತು
ನಿಗಮಗಳ ನಿರ್ಧಾರಕ್ಕೆ ಕೆಎಸ್ಆರ್ಟಿಸಿ ಬಿಎಂಟಿಸಿ,ವಾಯುವ್ಯ ಹಾಗೂ ಕಲ್ಯಾಣ ಸಾರಿಗೆ ನಿಗಮಗಳ 1 ಲಕ್ಷ ,30 ನೌಕರರು ಅಸಮಾಧಾನ ಹೊರಹಾಕುತ್ತಿದ್ದಾರೆ. 2016 ರಲ್ಲಿ ಶೇ 12.5 ರಷ್ಟು ವೇತನ ಪರಿಷ್ಕರಣೆ ಆಗಿತ್ತು, ಆದ್ರೆ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ನಡೆಸಿ ಸರ್ಕಾರ ಒಂದೂವರೆ ವರ್ಷ ಕಳೆದರೂ ಬೇಡಿಕೆ ಈಡೇರಿಸದಿದೆ. ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಸರ್ಕಾರಕ್ಕೆ ಸಾರಿಗೆ ನೌಕರರ ಹೋರಾಟದ ಟೆನ್ಷನ್ ಇದೆ.
ಸಾರಿಗೆ ನೌಕರರ ಬೇಡಿಕೇನು..?
- ಸಾರಿಗೆ ನೌಕರರಿಗೆ ಶೇ 25 ರಷ್ಟು ವೇತನ ಹೆಚ್ಚಳ ಆಗಬೇಕು.
- ನೌಕರರ ಹಾಲಿ ಇರುವ ಬಾಟ,ಭತ್ಯೆಗಳು 5 ಪಟ್ಟು ಹೆಚ್ಚಿಸಬೇಕು.
- ವೈದ್ಯಕೀಯ ಸೌಲಭ್ಯಕ್ಕಾಗಿ ಎಲ್ಲಾ ನೌಕರರಿಗೆ ಪ್ರತಿ ತಿಂಗಳು ಹೊರರೋಗಿ ಚಿಕಿತ್ಸೆ ವೆಚ್ಚಕ್ಕಾಗಿ 2 ಸಾವಿರ ನೀಡಬೇಕು.
- ಕಳೆದ ಬಾರಿ ಮುಷ್ಕರ ವೇಳೆ ವಜಾಗೊಂಡ ನೌಕರರ ಮರುನೇಮಕ ಆಗಬೇಕು.
- ಹೆಚ್ಚುವರಿ ಕೆಲಸದ ಅವಧಿಗೆ ಭತ್ಯೆ ನೀಡಬೇಕು.
- ನೌಕರರಿಗೆ ಪಾಳಿ ವ್ಯವಸ್ಥೆ ಜಾರಿಯಾಗಬೇಕು.
- ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ನಿಲ್ಲಿಸಬೇಕು.
- ಎಲ್ಲಾ ನೌಕರರಿಗೆ ಗ್ರಾಚ್ಯೂಟಿ ನೀಡಬೇಕು.
- ಕೂಡಲೇ ಖಾಲಿ ಹುದ್ದೆಗಳನ್ನ ಭರ್ತಿ ಮಾಡಬೇಕು.
ಇದನ್ನೂ ಓದಿ : ಯಾದಗಿರಿಯಲ್ಲಿ ಆರೋಗ್ಯಾಧಿಕಾರಿ ಅಶ್ಲೀಲ ಪದ ಬಳಕೆ… ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಲು ಸಿಬ್ಬಂದಿ ಆಗ್ರಹ…