ಬೆಂಗಳೂರು : ರಾಜ್ಯದಲ್ಲಿ ಧರ್ಮ ದಂಗಲ್ ತೀವ್ರ ಸ್ವರೂಪ ಪಡೆದಿದ್ದು, ಹಿಂದೂ ಸಂಘಟನೆಗಳು ಬಿಜೆಪಿ MLA ವಿರುದ್ಧವೇ ತಿರುಗಿಬಿದ್ದಿದೆ. ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ವಿರುದ್ಧ ಭಜರಂಗದಳ ಆಕ್ರೋಶ ಹೊರಹಾಕುತ್ತಿದ್ಧಾರೆ.
ದೇಗುಲದಲ್ಲಿ ಅನ್ಯಧರ್ಮೀಯರ ವ್ಯಾಪಾರ ನಿರ್ಬಂಧ ವಿಚಾರವಾಗಿ ಬಿಜೆಪಿ ಶಾಸಕ v/s ಭಜರಂಗದಳ ನಡುವೆ ಧರ್ಮ ಸಂಘರ್ಷ ಶುರುವಾಗಿದೆ. ನಾಳೆ ಸಜ್ಜನ್ ರಾವ್ ಸರ್ಕಲ್ ಸುಬ್ರಹ್ಮಣ್ಯ ದೇಗುಲದಲ್ಲಿ ಚಂಪಾ ಷಷ್ಠಿ ಹಿನ್ನೆಲೆ ಹಿಂದೂಯೇತರ ಧರ್ಮೀಯರ ನಿರ್ಬಂಧಕ್ಕೆ ಹಿಂದೂ ಸಂಘಟನೆಗಳು ಆಗ್ರಹಿಸಿದೆ. ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಭಜರಂಗದಳ ಮನವಿ ಮಾಡಿತ್ತು.
ಚಿಕ್ಕಪೇಟೆ MLA ಎಲ್ಲರಿಗೂ ಅವಕಾಶ ನೀಡಿ ನಾವೆಲ್ಲ ಒಂದೇ ಎಂದು ಹೇಳಿಕೆ ನೀಡಿದ್ದರು. ಉದಯ್ ಗರುಡಾಚಾರ್ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ ಹೊರಹಾಕಿದ್ದಾರೆ. ನಿಮಗೆ ತಾಕತ್ತಿದ್ದರೆ ಮಸೀದಿ ಜಾಗಗಳಲ್ಲಿ ಹಿಂದೂ ವ್ಯಾಪಾರಿಗಳಿಗೆ ಅವಕಾಶ ಕೊಡಿ, ಸೆಕ್ಯುಲರಿಸಂ ಅನ್ನೋದು ಹಿಂದೂ ದೇವಾಲಯದ ವಿಚಾರದಲ್ಲಿ ಮಾತ್ರ ಯಾಕೆ…?ಶಾಸಕ ಗರುಡಾಚಾರ್ ವಿರುದ್ಧ ಭಜರಂಗದಳದ ತೇಜಸ್ ಗೌಡ ತೀವ್ರ ಆಕ್ರೋಶ ಹೊರಹಾಕಿದ್ಧಾರೆ. ತೇಜಸ್ ಮಸೀದಿ ಬಳಿ ಹಿಂದೂ ವ್ಯಾಪಾರಿಗಳಿಗೆ ಅವಕಾಶ ಕೊಡಿಸಿ ಎಂದು ಸವಾಲ್ ಹಾಕಿದ್ಧಾರೆ.
ಇದನ್ನೂ ಓದಿ : ಕೆಲಸ ಕೊಟ್ಟ ಮಾಲೀಕನೊಂದಿಗೆ ಪ್ರೇಮದಾಟ… ಸೆಕ್ಸ್‌ಗೆ ಸಮ್ಮತಿಸಿ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಪೀಕಿದ ಕೆಲಸದಾಕೆ…