ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮೋದಿ ಅವರ ಅಂತಿಮ ವೇಳಾಪಟ್ಟಿ ಬಿಡುಗಡೆಯಾಗಿದೆ. ಮಿನಿಟು ಮಿನಿಟ್ ಪ್ರೋಗ್ರಾಮ್ ಲಿಸ್ಟ್ ಇಲ್ಲಿದೆ ನೋಡಿ..
ಮೋದಿಯವರು ಬೆಳಗ್ಗೆ 11: 55ಕ್ಕೆ ಯಲಹಂಕದ ವಿಮಾನನಿಲ್ದಾಣಕ್ಕೆ, 12:30 ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 01:45ಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿ, ಮಧ್ಯಾಹ್ನ 2 ಗಂಟೆ 45 ನಿಮಿಷಕ್ಕೆ ಕೊಮ್ಮಘಟ್ಟ ದ ಸಾರ್ವಜನಿಕರ ಕಾರ್ಯಕ್ರಮದಲ್ಲಿ ಭಾಗಿ, ಸಂಜೆ 4.30 ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಪ್ರಯಾಣ ನಡೆಸಲಿದ್ದಾರೆ.
ಸಂಜೆ 5.30 ಕ್ಕೆ ಮೈಸೂರಿನ ಮಹಾರಾಜ ಗ್ರೌಂಡ್ ನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಸಂಜೆ 7:00 ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದು, ಸಂಜೆ 7.30 ಕ್ಕೆ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಪ್ರಧಾನಿ ಮೋದಿ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. 21ನೇ ತಾರೀಖು ಬೆಳಿಗ್ಗೆ 6:30ಕ್ಕೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯಲ್ಲಿ ಭಾಗಿಯಾಗಲಿದ್ದಾರೆ. 8 10ಕ್ಕೆ walk-through ಅಫ್ ಎಕ್ಸಿಬಿಷನ್ ನಲ್ಲಿ ಭಾಗಿಯಾಗಲಿದ್ದಾರೆ. 8:50 ಕ್ಕೆ ಮೈಸೂರು ಅರಮನೆಗೆ ಭೇಟಿ ಹಾಗೂ 9:00 ಗಂಟೆ 45 ನಿಮಿಷಕ್ಕೆ ಮೈಸೂರಿನಿಂದ ದೆಹಲಿಗೆ ಹಾರಲಿದ್ದಾರೆ.
ಇದನ್ನೂ ಓದಿ : ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದ ಮಿಥುನ್ ಮೃತದೇಹ ಕೆ.ಆರ್.ಪುರಂ ರಾಜಕಾಲುವೆಯಲ್ಲಿ ಪತ್ತೆ..!