ಬಾಲಿ : ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಜಿ-20 ಸಮ್ಮಿಟ್ನಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ಧಾರೆ.
ಭೋಜನಕೂಟದಲ್ಲಿ ಮುಖಾಮುಖಿಯಾದ ಮೋದಿ ಮತ್ತು ಜಿನ್ಪಿಂಗ್ ಕೆಲಹೊತ್ತು ಸಮಾಲೋಚಿಸಿದರು. ಜಿ.20 ಸಮ್ಮೇಳನ ಅಂಗವಾಗಿ ಪ್ರಧಾನಿ ಮೋದಿ ಇಂಡೋನೇಷ್ಯಾದ ಬಾಲಿಯಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಇಂಗ್ಲೆಂಡ್ ಪ್ರಧಾನಿ ರಿಚಿ ಸುನುಕ್ ಸೇರಿ ಹಲವು ದಿಗ್ಗಜರ ಜತೆ ನಮೋ ಭೇಟಿ ಮಾಡಿ ಸಮಾಲೋಚಿಸಿದ್ದಾರೆ. ಆದರೆ ಚೀನಾ ಅಧ್ಯಕ್ಷರ ಜತೆ ಅಧಿಕೃತ ಸಭೆ ನಡೆಸದೇ ಇದ್ದರೂ ಭೋಜನಕೂಟದಲ್ಲಿ ಮುಖಾಮುಖಿಯಾದರು. ಇಂಡೋನೇಷ್ಯಾ ಅಧ್ಯಕ್ಷ ಜಾಕೋ ವಿಡುಡೋ ಡಿನ್ನರ್ ಏರ್ಪಡಿಸಿದ್ದರು.
ಇಂಡೋನೇಷ್ಯಾದಲ್ಲಿ ಭಾರತೀಯ ಸಮುದಾಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯ್ತು. ಮೋದಿ-ಮೋದಿ ಅಂತಾ ಕೂಗುತ್ತಾ ಭಾರತೀಯ ಸಮುದಾಯ ಹರ್ಷ ವ್ಯಕ್ತಪಡಿಸಿತು.
ಇದನ್ನೂ ಓದಿ : AICC ಅಧ್ಯಕ್ಷ ಖರ್ಗೆ ಭೇಟಿಯಾದ ಡಿ.ಕೆ.ಶಿವಕುಮಾರ್… ಖರ್ಗೆ ನಿವಾಸಕ್ಕೆ ತೆರಳಿ ಮಹತ್ವದ ಮಾತುಕತೆ ನಡೆಸಿದ ಡಿಕೆಶಿ..