ಗುಲ್ಬರ್ಗಾ : ಪ್ರಧಾನಿ ಮೋದಿ ಕಲಬುರಗಿಯ ಮಳಖೇಡಕ್ಕೆ ಬಂದಿದ್ದಾರೆ. 52,072 ಫಲಾನುಭವಿಗಳಿಗೆ ಒಂದೇ ವೇದಿಕೆಯಡಿ ಹಕ್ಕುಪತ್ರ ನೀಡಿದ್ದಾರೆ.
ಮುಳಖೇಡ ಕಾರ್ಯಕ್ರಮ ಗಿನ್ನೆಸ್ ದಾಖಲೆ ಬರೆಯಲು ಸಜ್ಜಾಗಿದೆ. ಲಂಬಾಣಿ ತಾಂಡಾಗಳಿಗೆ ಕಂದಾಯ ಗ್ರಾಮಗಳ ಘೋಷಣೆಯಾಗಿದೆ. ಕಂದಾಯ ಇಲಾಖೆಯಿಂದ ಐತಿಹಾಸಿಕ ಕಾರ್ಯಕ್ರಮ ನಡೆದಿದೆ. ಕಂದಾಯ ಸಚಿವ ಆರ್.ಅಶೋಕ್ ಐತಿಹಾಸಿಕ ಕಾರ್ಯಕ್ರಮದ ರೂವಾರಿಯಾಗಿದ್ದಾರೆ. ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯಾಗಿದೆ. ತಾಂಡಾ, ಹಟ್ಟಿ, ಆಡಿ,ಕ್ಯಾಂಪ್‌ಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಿದೆ. 250ಕ್ಕೂ ಹೆಚ್ಚು ತಾಂಡಾಗಳು ಕಂದಾಯ ಗ್ರಾಮಗಳಾಗಿ ಘೋಷಣೆಯಾಗಿದ್ದು, ರಾಯಚೂರು, ಯಾದಗಿರಿ, ಬೀದರ್, ಕಲಬುರಗಿ ತಾಂಡಾ ಜನರು ಭಾಗಿಯಾಗಿದ್ದಾರೆ.
ಇದನ್ನೂ ಓದಿ : ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ : MLA ಬೋರ್ಡ್ ಇದ್ದ ವಾಹನಕ್ಕೆ ಕ್ಲಾಂಪ್ ಹಾಕಿದ ಬಸವನಗುಡಿ ಸಂಚಾರಿ ಪೊಲೀಸರು..!