ಬೆಂಗಳೂರು : ನಾಳೆ-ನಾಡಿದ್ದು ಕರುನಾಡಿನಲ್ಲಿ ನಮೋ ಹವಾ ಶುರುವಾಗಲಿದೆ. ಕರ್ನಾಟಕ ಪ್ರಧಾನಿ ಸ್ವಾಗತಕ್ಕೆ ರೆಡಿಯಾಗ್ತಿದೆ. ನಾಳೆ ಬೆಂಗಳೂರು, ನಾಡಿದ್ದು ಮೈಸೂರಿಗೆ ಭೇಟಿ ನೀಡಲಿದ್ದಾರೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ . ಸಬ್ ಅರ್ಬನ್ ರೈಲು ಸೇರಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದು, ನಾಳೆ ಸಂಜೆ ಮೈಸೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೂ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ಕೊಡಲಿದ್ದಾರೆಂದು ಹೇಳಿದ್ದಾರೆ.