ಕೊರೋನ ಮಹಾಮಾರಿ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು, ಇದೀಗ ಕ್ರಮೇಣ ಸೋಂಕು ಇಳಿಮುಖ ಕಂಡಿದ್ದು, 2 ವರ್ಷಗಳ ಬಳಿಕ ಮತ್ತೆ ಪ್ರೈಮರಿ ಸ್ಕೂಲ್ ಶುರುವಾಗುತ್ತಿದೆ. ಇಂದಿನಿಂದ 6,7,8ನೇ ತರಗತಿ ಪ್ರಾರಂಭವಾಗಲಿದೆ.
ದಿನ ಬಿಟ್ಟು ದಿನ ಶಾಲೆ ಆರಂಭಕ್ಕೆ ಸರ್ಕಾರ ಫರ್ಮಿಷನ್ ನೀಡಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಕ್ಲಾಸ್ ನಡೆಯುತ್ತದೆ.
ಶನಿವಾರ, ಭಾನುವಾರ 2 ದಿನ ಇಡೀ ಶಾಲೆಗೆ ಸ್ಯಾನಿಟೈಸ್ ಮಾಡಬೇಕೆಂದು ಸರ್ಕಾರ ಆದೇಶಿಸಿದ್ದು, ಶಿಕ್ಷಕರು ಬ್ಯಾಚ್ ವೈಸ್ ಮಕ್ಕಳಿಗೆ ಪಾಠ ಮಾಡಲಿದ್ದಾರೆ. ಪಾಸಿಟಿವಿಟಿ ರೇಟ್ 2ಕ್ಕಿಂತ ಕಮ್ಮಿ ಇರೋ ಕಡೆ ಸ್ಕೂಲ್ ಓಪನ್ ಮಾಡಲಾಗುತ್ತದೆ.
ಶಾಲೆ ಆರಂಭಕ್ಕೆ ಗೈಡ್ಲೈನ್…
ದಿನ ಬಿಟ್ಟು ದಿನ ಬ್ಯಾಚ್ಗಳ ಮೂಲಕ ತರಗತಿ ನಡೆಸಲು ಸೂಚನೆ, ಶೇ.2ಕ್ಕಿಂತ ಪಾಸಿಟಿವ್ ದರ ಕಡಿಮೆ ಇರೋ ಜಿಲ್ಲೆಗಳಲ್ಲಿ ಶಾಲಾರಂಭ. ಸೋಮವಾರದಿಂದ ಶುಕ್ರವಾರ ಮಾತ್ರ ತರಗತಿ ನಡೆಸಲು ಸೂಚಿಸಲಾಗಿದೆ. ಶನಿವಾರ, ಭಾನುವಾರ ಎರಡು ದಿನ ಸ್ಯಾನಿಟೈಸ್ ಮಾಡಲು ತೀರ್ಮಾನ. 6 ರಿಂದ 7ನೇ ತರಗತಿ ಮಕ್ಕಳಿಗೆ ಬೆಳಿಗ್ಗೆ 10: 30 ರಿಂದ ಮಧ್ಯಾಹ್ನ 1:30 ರವರೆಗೆ ತರಗತಿ ನಡೆಯುತ್ತದೆ. 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 2 ಗಂಟೆಯಿಂದ 4.30ರವರೆಗೆ ತರಗತಿ ನಡೆಸಲು ಸೂಚನೆ.
ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ, ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಸೋಂಕು ಇಲ್ಲದಿರೋದನ್ನ ಧೃಢಿಕರಿಸಬೇಕು, ಕುಡಿಯುವ ನೀರು ಹಾಗೂ ಆಹಾರ ಮನೆಯಿಂದಲೇ ತರಬೇಕು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ, ಆನ್ಲೈನ್ ತರಗತಿಗೂ ಅವಕಾಶವಿದೆ.
ಇದನ್ನೂ ಓದಿ:#Flashnews ಪೊಲೀಸ್ ಬಿಗಿ ಬಂದೋಬಸ್ತ್ ಮಧ್ಯೆ ಹುಬ್ಬಳ್ಳಿ-ಧಾರವಾಡದ 82 ವಾರ್ಡ್ಗಳ ಕೌಂಟಿಂಗ್ ಶುರು…