ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗಿದ್ದು, ಇಂದು ಸಂಜೆಯೇ 46 ವರ್ಷದ ಓಮಿಕ್ರಾನ್ ಸೋಂಕಿತ ವೈದ್ಯನ ಪ್ರಾಥಮಿಕ ಸಂಪರ್ಕಿತದಲ್ಲಿದವರ ಜೀನೋಮ್ ಸೀಕ್ವೆನ್ಸಿಂಗ್ ವರದಿ ಬರುವ ಸಾಧ್ಯತೆ ಇದ್ದು, ಇಂದು ರಾಜ್ಯದಲ್ಲಿ ಮತ್ತೆ ಒಮಿಕ್ರಾನ್ ಸ್ಫೋಟ ಆಗುತ್ತಾ ಎಂಬ ಭೀತಿ ಹೆಚ್ಚಾಗಿದೆ.
ಓಮಿಕ್ರಾನ್ ಸೋಂಕಿತ ವೈದ್ಯನ ಸಂಪರ್ಕಿತರ ಜೀನೋಮ್ ಸೀಕ್ವೆನ್ಸಿಂಗ್ ವರದಿ ಇಂದು ಬರಲಿದ್ದು, ವೈದ್ಯನ ಸಂಪರ್ಕದಲ್ಲಿದ್ದ 7 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 7 ಮಂದಿಯ ಸ್ಯಾಂಪಲ್ ಕೂಡ ಜೀನೋಮ್ ಸೀಕ್ವೆನ್ಸಿಂಗ್ ಗೆ ಕಳಿಸಲಾಗಿದ್ದು, ಇಂದು ಕೆಲವರ ವರದಿ ಬರುವ ಸಾಧ್ಯತೆ ಇದ್ದು ಆತಂಕ ಹೆಚ್ಚಳವಾಗಿದೆ. ಪ್ರಾಥಮಿಕ ಸಂಪರ್ಕಿತ ಐದು ಮಂದಿ ಕೂಡ ವೃತ್ತಿಯಲ್ಲಿ ವೈದ್ಯರಾಗಿದ್ದು, ಓಮಿಕ್ರಾನ್ ಪತ್ತೆಯಾಗಿರುವ ವೈದ್ಯರ ಪತ್ನಿಗೂ ಕೊರೋನಾ ಪಾಸಿಟಿವ್ ಬಂದಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಇವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳಿದ ನಾಲ್ಕು ಮಂದಿ ಪ್ರಾಥಮಿಕ ಸಂಪರ್ಕಿತರು ಕೂಡ ಬೌರಿಂಗ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ವರದಿ ಇಂದು ಸಂಜೆ ವೇಳೆಗೆ ಲಭ್ಯವಾಗುವ ಸಾಧ್ಯತೆ ಇದೆ. ಓಮಿಕ್ರಾನ್ ಸೋಂಕಿತನ ಪತ್ನಿ ಹಾಗೂ ಒಬ್ಬ ವೈದ್ಯನಿಗೆ ಓಮಿಕ್ರಾನ್ ಆತಂಕ ಎದುರಾಗಿದ್ದು, ಓಮಿಕ್ರಾನ್ ಸೋಂಕಿತನ ಪತ್ನಿ ಹಾಗೂ ಒಬ್ಬ ವೈದ್ಯ ಓಮಿಕ್ರಾನ ಕಾಣಿಸಿಕೊಂಡಿರೊ ವೈದ್ಯನಿಗೆ ಹತ್ತಿರದ ಸಂಪರ್ಕ ಬಂದಿದ್ದಾರೆ. ಓಮಿಕ್ರಾನ್ ಸೋಂಕಿತನ ಪತ್ನಿಗೆ ಓಮಿಕ್ರಾನ್ ಲಕ್ಷಣಗಳು ಗೋಚರಿಸಿದೆ.
ಇದನ್ನೂ ಓದಿ:ಡಿಸೆಂಬರ್‌ನ ಐದೇ ದಿನಗಳಲ್ಲಿ ಭರ್ಜರಿ ಫೈನ್… ಮಾಸ್ಕ್ ಧರಿಸದವರಿಂದ 9.26 ಲಕ್ಷ ದಂಡ ವಸೂಲಿ ಮಾಡಿದ ಮಾರ್ಷಲ್‌ಗಳು..!