ಕೋಲಾರ : ರಾಜ್ಯದ ಪ್ರತಿಷ್ಠಿತ ಸಂಸ್ಥೆಯ ಅಧಿಕಾರದ ಗುದ್ದಾಟ ಬೀದಿಗೆ ಬಂದಿದ್ದು, ದಿ.R.L.ಜಾಲಪ್ಪ ಕಟ್ಟಿ ಬೆಳೆಸಿದ ಮೆಡಿಕಲ್ ಸಂಸ್ಥೆಯಲ್ಲಿ ಕಲಹ ಶುರುವಾಗಿದೆ. ಜಾಲಪ್ಪ ಕುಟುಂಬಕ್ಕೆ ಸ್ಥಾನಮಾನ ನೀಡಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಷ ಹೊರಹಾಕಲಾಗುತ್ತಿದೆ.
ಸಂಸ್ಥೆ ಅಧ್ಯಕ್ಷರಾಗಿ ಜಿ.ಎಚ್ ನಾಗರಾಜ್ ಆಯ್ಕೆಯಾಗಿದ್ದು, ಈ ಹಿನ್ನೆಲೆ ಜಾಲಪ್ಪ ಕುಟುಂಬಕ್ಕೆ ಸ್ಥಾನಮಾನ ನೀಡಿಲ್ಲ, ಕುಟುಂಬ ಸದಸ್ಯರನ್ನು ಸಂಸ್ಥೆಗಳಿಂದ ಹೊರಗಿಟ್ಟಿರುವ ಆರೋಪ ಕೇಳಿಬರುತ್ತಿದ್ದು, ದೇವರಾಜ ಅರಸ್ ಎಜುಕೇಶನ್ ಟ್ರಸ್ಟ್, ಮೆಡಿಕಲ್ ಕಾಲೇಜ್, ಶಿಕ್ಷಣ ಸಂಸ್ಥೆಯಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ.
ಜಾಲಪ್ಪ ಹಿರಿಯ ಮಗ ಹಾಗೂ ದೊಡ್ಡಬಳ್ಳಾಪುರದ ಮಾಜಿ ಶಾಸಕ ನರಸಿಂಹಸ್ವಾಮಿಗೆ ಅಧಿಕಾರ ನೀಡುವಂತೆ ಪಟ್ಟು ಹಿಡಿಯಲಾಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಸ್ಥೆಯ ಹೆಸರಿನ ಪತ್ರ ಹರಿದಾಡುತ್ತಿದೆ. ಇಂದು ಮೆಡಿಕಲ್ ಕಾಲೇಜು ಮುಂಭಾಗ ಜಾಲಪ್ಪ ಕುಟುಂಬ ಹಾಗೂ ಕಾಲೇಜು ಸಿಬ್ಬಂದಿಯಿಂದ ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ರಾತ್ರಿ 11.30ರವರೆಗೂ ವ್ಯಾಪಾರಕ್ಕೆ ಅವಕಾಶ ನೀಡಿ…! ನೈಟ್ ಕರ್ಫ್ಯೂ ವಿನಾಯಿತಿಗೆ ಬಾರ್ ಮಾಲೀಕರ ಪಟ್ಟು…!