ರಾಯಚೂರು: ಮಂತ್ರಾಲಯ ಕ್ಷೇತ್ರದಲ್ಲಿ ಮಳೆಯ ಪ್ರಭಾವ, ರಾಯರ ದರ್ಶನಕ್ಕೆ ತೊಂದರೆಯಾಗಿದೆ ಎಂಬ ವದಂತಿ ಹಿನ್ನೆಲೆ ಶ್ರೀರಾಘವೇಂದ್ರ ಸ್ವಾಮಿ ಮಠ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಮಂತ್ರಾಲಯ ಕ್ಷೇತ್ರದಲ್ಲಿ ಮಳೆಯ ಪ್ರಭಾವದಿಂದ ರಾಯರ ದರ್ಶನಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ವದಂತಿ ಹಿನ್ನೆಲೆ ಶ್ರೀರಾಘವೇಂದ್ರ ಸ್ವಾಮಿ ಮಠ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ‘ಕಲಿಯುಗದ ಕಾಮಧೇನು ಶ್ರೀಗುರು ರಾಘವೇಂದ್ರ ಸನ್ನಿಧಿಯಲ್ಲಿ ಯಾವುದೇ ವ್ಯತ್ಯಯ ಇಲ್ಲ. ಸಾರಿಗೆ, ವಸತಿ, ದರ್ಶನ ತೀರ್ಥಪ್ರಸಾದದ ವ್ಯವಸ್ಥೆ ಎಂದಿನಂತೆ ನಡೆಯುತ್ತಿದೆ. ತುಂಗಭದ್ರಾ ನದಿಯೂ ಸಾಧಾರಣ ಮಟ್ಟದಲ್ಲಿ ಹರಿಯುತ್ತಿದ್ದು, ಭಕ್ತರು ಶ್ರೀಕ್ಷೇತ್ರಕ್ಕೆ ಬರಲು ಯಾವುದೇ ಆತಂಕ ಪಡಬೇಕಿಲ್ಲ. ಶ್ರೀಗುರುರಾಜರ ದರ್ಶನಾನುಗ್ರಹವನ್ನು ಪಡೆಯಬಹುದೆಂದು ಶ್ರೀಮಠ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಮಾನವೀಯತೆಯನ್ನೇ ಮರೆಸಿದ ಕೊರೊನಾ ದುರಂತ… 7 ತಿಂಗಳಿನಿಂದ ಮಾರ್ಚರಿಯಲ್ಲೇ ಕೊಳೆತ ಮೃತದೇಹಗಳು…