ಬೆಂಗಳೂರು: ಬಿಜೆಪಿಯಿಂದ ರಾಜ್ಯಸಭೆ, ಪರಿಷತ್ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದು, ರಾಜ್ಯಸಭೆ ಚುನಾವಣೆಗೆ ಪಕ್ಷದ 3ನೇ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ನಿರ್ಮಲಾ ಸೀತಾರಾಮನ್, ಕೆ.ಸಿ ರಾಮಮೂರ್ತಿಗೆ ಟಿಕೆಟ್ ಫಿಕ್ಸ್ ಆಗಿದ್ದು,
3ನೇ ಅಭ್ಯರ್ಥಿ ಆಯ್ಕೆ ಕುರಿತು ವರಿಷ್ಠರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.
ಇದೀಗ ಬಿಜೆಪಿಯಿಂದ ಅಖಾಡಕ್ಕಿಳಿಯುತ್ತಾರಾ ಉದ್ಯಮಿ ಪ್ರಕಾಶ್ ಶೆಟ್ಟಿ..? ಗೋಲ್ಡ್ ಫಿಂಚ್ ಮಾಲೀಕ ಪ್ರಕಾಶ್ ಶೆಟ್ಟಿಗೆ ಸಿಗುತ್ತಾ ಬಿಜೆಪಿ ಟಿಕೆಟ್..? ಎಂಬ ಕುತೂಹಲ ಹೆಚ್ಚಾಗಿದ್ದು, ವರಿಷ್ಠರನ್ನ ಭೇಟಿಯಾಗಿ ಪ್ರಕಾಶ್ ಶೆಟ್ಟಿ ಕುರಿತು ಸಿಎಂ ಚರ್ಚೆ ನಡೆಸಿದ್ದು, ಚುನಾವಣೆಗೆ ಪಕ್ಷದ 3ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಚರ್ಚಿಸಲಾಗಿದೆ. ಹೋಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿ ಜೆಡಿಎಸ್ಗೂ ಆಪ್ತರಾಗಿದ್ದು, ಬಿಜೆಪಿಯಿಂದ ಕಣಕ್ಕಿಳಿಸಿ ರಾಜ್ಯಸಭೆಗೆ ಕಳಿಸ್ತಾರಾ ಬಿಜೆಪಿ ವರಿಷ್ಠರು.. ಕಾದು ನೋಡಬೇಕಿದೆ.