ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಬಾಕಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಬಿಬಿಎಂಪಿ ಕಮಿಷನರ್ ಗೌರವ ಗುಪ್ತಾ ಖಡಕ್ ಸೂಚನೆ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 4,000 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನ ಪಾಲಿಕೆ ಹೊಂದಿತ್ತು. ಕೊರೋನಾ ಸಂಕಷ್ಟದ ನಡುವೆಯೂ 2,667.77 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಮಾರ್ಚ್ ಅಂತ್ಯದೊಳಗೆ ಉಳಿದ ತೆರಿಗೆ ವಸೂಲಿ ಮಾಡುವಂತೆ ಬಿಬಿಎಂಪಿ ಕಮಿಷನರ್ ಆದೇಶ ನೀಡಿದ್ದಾರೆ. ಟಾಪ್ ಡಿಫಾಲ್ಟ್ಗಳ ಪಟ್ಟಿ ಸಿದ್ದಪಡಿಸಿ ಹೆಚ್ಚ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶೀಘ್ರವೇ ನೋಟಿಸ್ ಕೊಟ್ಟು ತೆರಿಗೆ ವಸೂಲಿ ಮಾಡಿ. ಪಾವತಿ ಮಾಡದವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಲಯವಾರು ತೆರಿಗೆ ಸಂಗ್ರಹ
1. ಯಲಹಂಕ – 265.98 ಕೋಟಿ
2. ಮಹದೇವಪುರ – 683.07 ಕೋಟಿ
3. ದಾಸರಹಳ್ಳಿ – 73.78 ಕೋಟಿ
4. ಆರ್.ಆರ್.ನಗರ – 182 ಕೋಟಿ
5. ಬೊಮ್ಮನಹಳ್ಳಿ – 285.04 ಕೋಟಿ
6. ಬೆಂಗಳೂರು ಪಶ್ವಿಮ – 272.11 ಕೋಟಿ
7. ಬೆಂಗಳೂರು ದಕ್ಷಿಣ – 398.54 ಕೋಟಿ
8. ಬೆಂಗಳೂರು ಪೂರ್ವ – 507.26 ಕೋಟಿ
ಇದನ್ನೂ ಓದಿ:ಭಾರತೀಯ ಮಾರುಕಟ್ಟೆ ಅಲ್ಲೋಲ-ಕಲ್ಲೋಲ…! ಸತತ ನಾಲ್ಕನೇ ದಿನವೂ ಸೆನ್ಸೆಕ್ಸ್ ಕುಸಿತ…!