ವಿಜಯಪುರ: ಹಿಜಾಬ್ ವಿವಾದ ರಾಜ್ಯದೆಲ್ಲೆಡೆ ಭುಗಿಲೆದಿದ್ದು, ಸರ್ಕಾರವು ಮೂರು ದಿನಗಳ ಕಾಲ ಕಾಲೇಜುಗಳಿಗೆ ರಜೆ ಘೋಷಿಸಿದೆ . ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ಪರೀಕ್ಷೆ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಗುರುಬಸವ ವಿಜ್ಞಾನ ಕಾಲೇಜಿನಲ್ಲಿ ಪೊಲೀಸ್ ಭದ್ರತೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ಮೂರು ದಿನಗಳ ರಜೆ ನಡುವೆಯೂ ಪ್ರಾಕ್ಟಿಕಲ್ ಎಕ್ಸಾಂ ನಡೆಸಲಾಗಿದೆ. ವಿವಿಧ ವಿಷಯಗಳ 3ನೇ ಹಾಗೂ 5ನೇ ಸೆಮಿಸ್ಟರ್ ಎಕ್ಸಾಂ ನಡೆಯುತ್ತಿದ್ದು, ಫೆಬ್ರವರಿ 15ರವರೆಗೆ ಪ್ರಾಕ್ಟಿಕಲ್ ಪರೀಕ್ಷೆಗಳು ನಡೆಯಲಿದೆ. ಕಾಲೇಜಿನ ಹೊರಗೆ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ : ಟೆಡ್ಡಿ ಡೇಯನ್ನು ಏಕೆ ಆಚರಿಸಲಾಗುತ್ತದೆ..! ಈ ದಿನ ಟೆಡ್ಡಿಯನ್ನು ಏಕೆ ಉಡುಗೊರೆಯಾಗಿ ನೀಡಬೇಕು..? ಇಲ್ಲಿದೆ ಸಂಪೂರ್ಣ ಮಾಹಿತಿ…