ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೊಮ್ಮಘಟ್ಟದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯ ಬಳಿಕ ಮೈಸೂರಿಗೆ ತೆರಳಿದ್ದಾರೆ. ಅವರು ಮೈಸೂರಿಗೆ ತೆರಳುವ ಮುನ್ನ ಹೆಲಿಪ್ಯಾಡ್ ನಲ್ಲಿ ತಮ್ಮ ಕಾಲಿಗೆ ಬಿದ್ದ ನಾಯಕರ ಮೇಲೆ ಗರಂ ಆಗಿದ್ದಾರೆ.
ಕಾರ್ಯಕ್ರಮ ಮುಗಿಸಿ ಮೋದಿ ಅವರು ಕೊಮ್ಮಘಟ್ಟ ಹೆಲಿಪ್ಯಾಡ್ ಗೆ ಆಗಮಿಸಿದರು. ಈ ವೇಳೆ ಹೆಲಿಪ್ಯಾಡ್ ನಲ್ಲಿದ್ದ ಬಿಜೆಪಿ ನಾಯಕರೊಬ್ಬರು ಮೋದಿ ಅವರ ಕಾಲಿಗೆ ಬೀಳಲು ಮುಂದಾದರು. ತಕ್ಷಣ ಹಿಂದೆ ಸರಿದ ಮೋದಿ ಅವರು ಏ ಸಬ್ ನಹಿ ಕರ್ ನಾ ಹೈ… ಅಚ್ಚಾ ನಹೀಂ ಹೇ ಎಂದು ಬಿಜೆಪಿ ನಾಯಕನಿಗೆ ಸ್ಪಷ್ಟವಾಗಿ ಹೇಳಿ ಬಳಿ ತೆರಳಿದರು.