ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಕ್ಷಣಗಣನೆ ಇದ್ದು, ಮಧ್ಯಾಹ್ನ ಐಟಿಸಿಟಿಗೆ ನಮೋ ಎಂಟ್ರಿ ಕೊಡ್ತಿದ್ದಾರೆ. ಇಂದಿನಿಂದ ಎರಡು ದಿನ ರಾಜ್ಯದಲ್ಲಿ ಮೋದಿ ಹವಾ ಶುರುವಾಗಲಿದೆ. ಬೆಂಗಳೂರಿಗರೇ ಇವತ್ತು ಈ ರಸ್ತೆ ಅವೈಡ್ ಮಾಡಿ, ಮದ್ಯಾಹ್ನ 12.30 ರಿಂದ 3 ಗಂಟೆವರೆಗೂ ಕೆಲ ರಸ್ತೆ ಸಂಚಾರ ಬಂದ್ ಮಾಡಲಾಗುತ್ತದೆ.
- ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ.
- ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ ನಿಷೇಧ.
- ನೈಸ್ ರಸ್ತೆ ಮುಖಾಂತರ ನೈಸ್ ಕಚೇರಿ – ಸೋಂಪುರ ಟೋಲ್ .
- ಉತ್ತರಹಳ್ಳಿ ಮುಖ್ಯರಸ್ತೆ – ಸೋಂಪುರ ಟೋಲ್, ಮೈಸೂರು ಕಡೆಗೆ ಅವಕಾಶ.
- ನಾಗರಭಾವಿ ಸರ್ಕಲ್ನಿಂದ ಜ್ಞಾನಭಾರತಿ ಆಡ್ಮಿನ್ ಬ್ಲಾಕ್ವರೆಗೆ ನಿಷೇಧ.
- ನಾಗರಭಾವಿ ಸರ್ಕಲ್- ಅಂಬೇಡ್ಕರ್ ಕಾಲೇಜ್ ಜಂಕ್ಷನ್‌ನಿಂದ ವಿವಿ ಕಡೆಗೆ.
- ಮೈಸೂರು ರಸ್ತೆ-ವಿವಿ ಕಡೆಗೆ ಹಳೇ ರಿಂಗ್ ರಸ್ತೆ ಉಲ್ಲಾಳ ಜಂಕ್ಷನ್ ಬಂದ್.
- ಆರ್.ಆರ್.ಆರ್ಚ್, ನಾಯಂಡಹಳ್ಳಿ ಜಂಕ್ಷನ್ – ನಾಗರಭಾವಿ ಕಡೆಗೆ ಅವಕಾಶ- ಕೆಂಗುಂಟೆ ಜಂಕ್ಷನ್ – ನಮ್ಮೂರ ತಿಂಡಿ – ನಾಗರಭಾವಿ ರಿಂಗ್ ರಸ್ತೆ ನಿಷೇಧ.
- ತುಮಕೂರು ರಸ್ತೆ ಸಿಟಿಗೆ ಭಾರೀ ವಾಹನಗಳ ಎಂಟ್ರಿ ಇಲ್ಲ.
- ಯಲಹಂಕ, ಕೋಲಾರ, ಹೈದರಬಾದ್ ಕಡೆಗೆ ಸಂಚಾರ ಬದಲಾವಣೆ.
- ದಾಬಸ್ಪೇಟೆಯಲ್ಲೇ ಎಡತಿರುವು ಪಡೆದು ದೊಡ್ಡಬಳ್ಳಾಪುರಕ್ಕೆ ಎಂಟ್ರಿ.
- ಕೊಮ್ಮಘಟ್ಟ ಮುಖ್ಯ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡುವಂತಿಲ್ಲ.
- ನಾಗರಭಾವಿ ಸರ್ಕಲ್-ಜ್ಞಾನಭಾರತಿ ಕಚೇರಿವರೆಗೆ ಪಾರ್ಕಿಂಗ್ ನಿಷೇಧ.
- ಯುನಿವರ್ಸಿಟಿ ಒಳಭಾಗದ ಮುಖ್ಯರಸ್ತೆ, ಲೇಡೀಸ್ ಹಾಸ್ಟಲ್ ರಸ್ತೆ.
- ಗಾಂಧಿ ಮಾರ್ಗ್ ರಸ್ತೆ, ಜೈರಾಮ್ ದಾಸ್ ಜಂಕ್ಷನ್ವರೆಗೆ ಪಾರ್ಕಿಂಗ್ ರದ್ದಾಗಲಿದೆ.
ಇದನ್ನೂ ಓದಿ : ಚಾಮುಂಡಿ ಬೆಟ್ಟದ ಹುಂಡಿ ಹಣ ಎಣಿಕೆ : 2 ಕೋಟಿಗೂ ಅಧಿಕ ಮೊತ್ತ ಸಂಗ್ರಹ..! 23 ವಿದೇಶಿ ನೋಟುಗಳು ಪತ್ತೆ..!