ಹುಬ್ಬಳ್ಳಿ: ಧಾರವಾಡ-ಹುಬ್ಬಳ್ಳಿ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿನ ಪೊಲೀಸ್ ಕಣ್ಗಾವಲಿಗೆ ಕಾರಣವಾಗುವ ಹಲವು ಯಂತ್ರಗಳು ಹಣ ತುಂಬದೇ ಇರುವುದಕ್ಕೆ ಬಂದ್ ಆಗಿರುವುದು ಬೆಳಕಿಗೆ ಬಂದಿದೆ.
ಹೌದು.. ಕಮೀಷನರ್ ವ್ಯಾಪ್ತಿಯಲ್ಲಿ 5 ಆಟೋಮ್ಯಾಟಿಕ್ ಕ್ಯಾಮೆರಾ, 35 ನೈಟ್ ವಿಷನ್ ಕ್ಯಾಮೆರಾ, 34 ಸಿಸಿ ಕ್ಯಾಮೆರಾ, 74 ಫೈನ್ ಮೆಷನ್, 100 ಮೊಬೈಲ್ ಫೋನ್ ಗಳು ಕಾರ್ಯವನ್ನ ಮಾಡದೇ ಸುಮ್ಮನೆ ಮಲಗಿವೆ. ಇದಕ್ಕೆ ಕಾರಣ ಇಲಾಖೆಯಿಂದ ಹಣ ನೀಡಿಲ್ಲ ಎಂಬುದು.
ಇದನ್ನೂ ಓದಿ: 6 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿ..! ACB ಬಲೆಗೆ ಬಿದ್ದ ಲಂಚಕೋರ..!
ಅಸಲಿಗೆ ಹಣ ನೀಡದೇ ಇರುವುದಕ್ಕೆ ಕಾರಣವೇನು ದೊಡ್ಡದ್ದಲ್ಲ. ಆದರೆ, ಈ ಯಂತ್ರಗಳನ್ನ ಮೊದಲು ಖರೀದಿಸುವಾಗ ಹೆಚ್ಚುವರಿ ಹಣವನ್ನ ನೀಡಿದ್ದಾರೆಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಅದೇಲ್ಲವನ್ನೂ ಪರಿಶೀಲನೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.