ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಐದು ದಿನಗಳ ನಂತರ ಮತ್ತೆ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಪ್ರತೀ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ತಲಾ 25 ಪೈಸೆ ಏರಿಕೆಯಾಗಿದ್ದು. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 91.07 ರೂ ಗೆ ಏರಿಕೆಯಾಗಿದ್ದು, ಡೀಸೆಲ್ 81.34 ರೂಗಳನ್ನು ತಲುಪಿದೆ.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 26 ಪೈಸೆ ಏರಿಕೆಯಾಗಿದ್ದು, ಆ ಮೂಲಕ ಪೆಟ್ರೋಲ್ ದರ 87.28ಕ್ಕೆ ಏರಿಕೆಯಾಗಿದೆ. ಅಂತೆಯೇ ಡೀಸೆಲ್ ದರದಲ್ಲಿ ಕೂಡ 26 ಪೈಸೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 79.12 ರೂಗೆ ಏರಿಕೆಯಾಗಿದೆ. 29 ದಿನಗಳವರೆಗೆ ಬೆಲೆಗಳು ಸ್ಥಿರವಾಗಿದ್ದ ನಂತರ ತೈಲ ಕಂಪನಿಗಳು ಜನವರಿ 06 ಮತ್ತು 07 ರಂದು ಎರಡೂ ಇಂಧನಗಳ ಬೆಲೆಯನ್ನು ಹೆಚ್ಚಿಸಿದ್ದವು. ಜನವರಿ 6 ಮತ್ತು 7 ರಂದು ಪೆಟ್ರೋಲ್ ಬೆಲೆ 49 ಪೈಸೆ ಆಗಿದ್ದರೆ, ಡೀಸೆಲ್ ಬೆಲೆಯನ್ನು 51 ಪೈಸೆ ಹೆಚ್ಚಿಸಿದೆ. ಇದೀಗ ಮತ್ತೆ ಪೆಟ್ರೊಲ್ ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ.