ರಾಮನಗರ : ಜನರನ್ನು ನಂಬಿಸಲು ಅವರಿಬ್ಬರೂ ಕೈ ಎತ್ತುತ್ತಿದ್ದಾರೆ. ಕೈ ಎತ್ತೋದು ಇಳಿಸೋದು ಆಯಾ ಸಂದರ್ಭಕ್ಕೆ ನಡೆಯುತ್ತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಆಲಿಂಗನಕ್ಕೆ ಮಾಜಿ ಸಿಎಂ H.D. ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ಧಾರೆ.
ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ ನನಗೂ ಕೈ ಕೈ ಹಿಡಿದುಕೊಂಡು ಕೈ ಎತ್ತಿರಲಿಲ್ಲವೇ ? ಮೈತ್ರಿ ಸರ್ಕಾರದಲ್ಲಿ ನಾನು ಅದನ್ನೆಲ್ಲ ನೋಡಿದ್ದೆ. ಮುಂದೆ ಯಾರ್ಯಾರು ಬೆನ್ನಿಗೆ ಚೂರಿ ಹಾಕ್ತಾರೋ ನೋಡೋಣ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ರಾಮನಗರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಸ್ಕೂಲ್ ಬಸ್… 25 ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರು…