ಲಾಹೋರ್: 2008 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜಮಾತ್ ಉದ್ ದುವಾ ಮುಖ್ಯಸ್ಥ ಮೋಸ್ಟ್ ವಾಂಟೆಡ್ ಉಗ್ರ ಹಫೀಜ್ ಸಯೀದ್ ಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್ 31 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಭಯೋತ್ಪಾದನಾ ನಿಗ್ರಹ ಕೋರ್ಟ್ ನ ನ್ಯಾಯಾಧೀಶರಾದ ಎಜಾಜ್ ಅಹಮದ್ ಬುಟ್ಟರ್ ಅವರು ಪಂಜಾಬ್ ಪೊಲೀಸ್ ನ ಭಯೋತ್ಪಾನಾ ನಿಗ್ರಹ ಪಡೆ ದಾಖಲಿಸಿದ್ದ 21/2019 and 90/2019 ಎಫ್ ಐಆರ್ ಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡಿದೆ. ಒಂದು ಪ್ರಕರಣದಲ್ಲಿ 15.5 ವರ್ಷ ಹಾಗೂ ಮತ್ತೊಂದು ಪ್ರಕರಣದಲ್ಲಿ 15.5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಆತನಿಗೆ 3,40,000 ಪಾಕಿಸ್ತಾನಿ ರೂ. ದಂಡ ವಿಧಿಸಿದ್ದು, ಆತನ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ: ಸುಪ್ರಿಯಾ ಸುಳೆ ಮೆಲ್ಲಗೆ ಮಾತನಾಡುತ್ತಿದ್ದರು, ಅವರ ಮಾತು ಕೇಳಿಸಿಕೊಳ್ಳಲು ಡೆಸ್ಕ್ ಮೇಲೆ ಒರಗಿದೆ… ಶಶಿ ತರೂರ್ ಸ್ಪಷ್ಟನೆ…
ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಫೀಜ್ ಸಯೀದ್ 2019 ರಿಂದ ಲಾಹೋರ್ ನ ಕೋಟ್ ಕಖ್ ಪತ್ ಜೈಲಿನಲ್ಲಿದ್ದಾನೆ. ಆತನನ್ನು ಬಿಗಿ ಭದ್ರತೆಯಲ್ಲಿ ಜೈಲಿನಿಂದ ಕೋರ್ಟ್ ಗೆ ಕರೆತರಲಾಗಿತ್ತು.
2008 ರ ನವೆಂಬರ್ 26 ರಮದು ಮುಂಬೈನ ಹಲವು ಭಾಗಗಳಲ್ಲಿ ಲಷ್ಕರ್ ಎ ತೋಯ್ಬಾ (LeT) ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ 166 ಜನರು ಮೃತಪಟ್ಟಿದ್ದಾರೆ. ಈ ದಾಳಿಯ ರೂವಾರಿ ಹಫೀಜ್ ಸಯೀದ್ ಆಗಿದ್ದ.
ಈ ಮೊದಲು 2020 ರಲ್ಲಿ ಉಗ್ರರಿಗೆ ಹಣಸಹಾಯ ಮಾಡಿದ ಆರೋಪದ ಮೇಲೆ 15.5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ವಿಶ್ವ ಸಂಸ್ಥೆ ಸಹ ಈತನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿದೆ. ಅಮೆರಿಯ ಈತನ ತಲೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಈತನನ್ನು ಪಾಕಿಸ್ತಾನಿ ಪೊಲೀಸರು 2019ರ ಜುಲೈ 17 ರಂದು ಬಂಧಿಸಿ ಜೈಲಿಗೆ ಕಳುಹಿಸಿದ್ಧಾರೆ.
ಇದನ್ನೂ ಓದಿ: ಕರಗ ದರ್ಗಾಗೆ ಹೋಗುವುದು ಗ್ಯಾರೆಂಟಿ ಯಾರು ತಪ್ಪಿಸಲು ಆಗುವುದಿಲ್ಲ ಡಿಸಿಪಿ ಅನುಚೇತ್ ಘೋಷಣೆ..!