ಬೆಂಗಳೂರು: ಡಾ. ರಾಜ್ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅಭಿಮಾನಿಗಳು ಒಂದಾಗಿದ್ದಾರೆ.. ಈ ಸಮಾಗಮಕ್ಕೆ ಕಾರಣವಾಗಿರೋದು ಮಾತ್ರ ಬಿಬಿಎಂಪಿ ಕೈಗೊಂಡಿರೋ ಅದೊಂದು ನಿರ್ಧಾರ.. ಮಹಾನ್ ನಾಯಕರ ಪ್ರತಿಮೆಗಳ ತೆರವಿಗೆ ಮುಂದಾಗಿರೋ ಬಿಬಿಎಂಪಿಗೆ ಪಾಠ ಕಲಿಸಲು ಮೇರುನಟರ ಅಭಿಮಾನಿಗಳು ಒಗ್ಗಟ್ಟಾಗಿದ್ದಾರೆ.. ದಿಗ್ಗಜರ ಪ್ರತಿಮೆಗೆ ಕೈ ಇಟ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.. ಇಲ್ಲಿದೆ ಓದಿ ಅದರ ಕಂಪ್ಲೀಟ್ ರಿಪೋರ್ಟ್..
ಇದನ್ನೂ ಓದಿ: ಆ ಕಹಿ ಘಟನೆಯಿಂದ ನೊಂದಿದ್ದ ಶಿಲ್ಪಾಶೆಟ್ಟಿ… ನಾರ್ಮಲ್ ಲೈಫ್ ಗೆ ಮರಳಲು ಏನು ಮಾಡ್ತಿದ್ದಾರೆ..?
ಡಾ. ರಾಜ್ಕುಮಾರ್ ಮತ್ತು ಡಾ. ವಿಷ್ಣುವರ್ಧನ್.. ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವ.. ಇಬ್ಬರಿಗೂ ಅಭಿಮಾನಿಗಳು ಮನಸ್ಸಿನಲ್ಲಿ ಗುಡಿ ಕಟ್ಟಿ ಪೂಜಿಸುತ್ತಿದ್ದಾರೆ.. ವಿವಿಧೆಡೆ ಪುತ್ಥಳಿಗಳನ್ನು ಸ್ಥಾಪಿಸಿದ್ದಾರೆ.. ಇಂತಹ ಮಹಾನ್ ನಾಯಕರ ಪುತ್ಥಳಿ ತೆರವಿಗೆ ಮುಂದಾಗಿರೋ ಬಿಬಿಎಂಪಿ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗ್ತಿದೆ.. ಅಣ್ಣಾವ್ರು ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ನಡುವಿನ ಶೀತಲ ಸಮರ ನಡೆಯುತ್ತಿದ್ರೂ, ಅದನ್ನು ಬದಿಗಿಟ್ಟು ಒಂದಾಗಿದ್ದಾರೆ.. ನಿಮಗೆ ಧೈರ್ಯ ಇದ್ರೆ, ಮಹಾನ್ ನಾಯಕರ ಪ್ರತಿಮೆ ಮೇಲೆ ಕೈ ಇಡಿ.. ಅದರ ಪರಿಣಾಮ ಹೇಗಿರುತ್ತೆ ಅನ್ನೋದನ್ನ ತೋರಿಸ್ತೀವಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ..
ಇದನ್ನೂ ಓದಿ: ಮಾಲ್ಡೀವ್ಸ್ನಲ್ಲಿ ಸನ್ನಿ ಲಿಯೋನ್ ಮೋಜು-ಮಸ್ತಿ ! ಬಿಕಿನಿ ತೊಟ್ಟು ಹಾಟ್ ಹಾಟ್ ಆಗಿ ಸನ್ನಿ ಕಮಾಲ್ !
ಕಾವೇರಿ ನಗರ ಪಾರ್ಕ್, ಪಟ್ಟೆಗಾರಪಾಳ್ಯ, ಶಿವನಹಳ್ಳಿ ಮುಖ್ಯರಸ್ತೆ, ಚೋಳೂರುಪಾಳ್ಯ, ಬಳೇಪೇಟೆ, ಎಂಸಿ ಬಡಾವಣೆ, ವಿಜಯನಗರ, ದತ್ತಾತ್ರೇಯ ರಸ್ತೆ, ಕೆಂಪಾಪುರ ಅಗ್ರಹಾರ, ರಾಯನ್ ಸರ್ಕಲ್, ಟಿಆರ್ ಮಿಲ್, ಅಕ್ಕಿಪೇಟೆ, ಮಂಜುನಾಥನಗರ, ಭಾಷ್ಯಂ ಸರ್ಕಲ್, ಶಿವನಹಳ್ಳಿ ಮುಖ್ಯರಸ್ತೆ ಸೇರಿದಂತೆ ಹಲವೆಡೆ ಪ್ರತಿಷ್ಠಾಪಿಸಲಾಗಿರುವ ಪ್ರತಿಮೆಗಳ ಸರ್ವೆ ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ.. ಸರ್ವೇ ಮುಗಿದ ಕೂಡಲೇ ಅನಧಿಕೃತ ಪ್ರತಿಮೆಗಳ ತೆರವು ಕಾರ್ಯಾಚರಣೆ ಶುರುವಾಗಲಿದೆ.. ಆದರೆ ಬಿಬಿಎಂಪಿ ನಿರ್ಧಾರಕ್ಕೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ..
ಮಹಾನ್ ನಾಯಕರ ಅಭಿಮಾನಿಗಳಿಂದ ಜಂಟಿ ಸುದ್ದಿಗೋಷ್ಠಿ ! ನಿರ್ಧಾರದಿಂದ ಹಿಂದೆ ಸರಿಯದಿದ್ರೆ ಉಗ್ರ ಹೋರಾಟದ ಎಚ್ಚರಿಕೆ !
ನಿನ್ನೆ ರಾಜಾಜಿನಗರದ ಡಾ. ರಾಜ್ಕುಮಾರ್ ಕ್ರೀಡಾ ಸಂಕೀರ್ಣ ಕಟ್ಟಡದಲ್ಲಿ ರಾಜ್ ಮತ್ತು ವಿಷ್ಣು ಅಭಿಮಾನಿಗಳು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ, ಬಿಬಿಎಂಪಿ ನಿರ್ಧಾರವನ್ನು ಖಂಡಿಸಿದ್ರು.. ಅಣ್ಣಾವ್ರ ಅಭಿಮಾನಿಗಳ ಪರವಾಗಿ ವಿ. ತ್ಯಾಗರಾಜ್ ಮತ್ತು ಸಾಹಸಸಿಂಹನ ಅಭಿಮಾನಿಗಳ ಪರವಾಗಿ ಕ್ರಾಂತಿ ರಾಜು ಸುದ್ದಿಗೋಷ್ಠಿಯ ಸಾರಥ್ಯ ವಹಿಸಿಕೊಂಡಿದ್ದರು.. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಾಗಿದ್ರು.. ಪುತ್ಥಳಿ ತೆರವಿಗೆ ಮುಂದಾಗಿರೋ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಕೋರ್ಟ್ ಆದೇಶದಂತೆ ಬಿಬಿಎಂಪಿ ಈ ಸಾಹಸಕ್ಕೆ ಕೈ ಹಾಕಿದೆ.. ನ್ಯಾಯಾಲಯದ ಮೇಲೆ ನಮಗೂ ಗೌರವ ಇದೆ.. ಆದ್ರು, ರಾಜ್ಯದಲ್ಲಿ ಮಹಾನ್ ನಾಯಕರ ಸಾಕಷ್ಟು ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ.. ಅದೆಲ್ಲವನ್ನು ಬಿಟ್ಟು ಕನ್ನಡ ಕಣ್ಮಣಿಗಳ ಪ್ರತಿಮೆಗಳ ತೆರವಿಗೆ ಬಿಬಿಎಂಪಿ ಮುಂದಾಗಿರೋದು ಸರಿಯಲ್ಲ.. ಎಲ್ಲಾ ಪುತ್ಥಳಿಗಳನ್ನು ತೆರೆವುಗೊಳಿಸಿದ್ರೆ, ಪರವಾಗಿಲ್ಲ.. ಆದ್ರೆ, ಕೆಲವೇ ಪುತ್ಥಳಿಗಳನ್ನು ತೆಗೆಯಲು ಮುಂದಾಗಿರೋದು ತಪ್ಪು ಅಂತ ಬೇಸರ ವ್ಯಕ್ತಪಡಿಸಿದ್ರು.. ಯಾವುದೇ ಹೋರಾಟಕ್ಕೂ ಸಿದ್ಧ ಅಂದ್ರು..
ಬಹುಕಾಲದಿಂದ ರಾಜ್ಕುಮಾರ್ ಮತ್ತು ವಿಷ್ಣುವರ್ಧನ್ ಅಭಿಮಾನಿಗಳ ಮಧ್ಯೆ ಸಂಘರ್ಷ ಏರ್ಪಟ್ಟಿರುತ್ತಿದ್ದವು.. 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ನಾಯಕರ ಅಭಿಮಾನಿಗಳು ಒಂದಾಗಿದ್ದಾರೆ.. ಸುದ್ದಿಗೋಷ್ಠಿ ನಂತ್ರ ಇಬ್ಬರು ನಾಯಕರ ಅಭಿಮಾನಿಗಳು ಒಟ್ಟಾಗಿ ಜಿಟಿ ಮಾಲ್ ಮುಂಭಾಗದ ಡಾ. ರಾಜ್ ಪುತ್ಥಳಿ ಮತ್ತು ಟೋಲ್ಗೇಟ್ ಸರ್ಕಲ್ ಬಳಿಯ ವಿಷ್ಣು ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿದ್ರು.. ಅಭಿಮಾನಿಗಳ ಮನವಿಗೆ ಬಿಬಿಎಂಪಿ ಮಣಿಯುತ್ತಾ ಕಾದು ನೋಡ್ಬೇಕು..